ಬಂಟ್ವಾಳ : ಹೇಳುವವರಿಲ್ಲ, ಕೇಳುವವರಿಲ್ಲ! ಹದಗೆಟ್ಟು ನಡೆಯಲಾರದ ಸ್ಥಿತಿಯಲ್ಲಿರುವ ಕೆದಿಲ ಗ್ರಾಮದ ಪಾಟ್ರಕೋಡಿ, ಕೋಡಿ ರಸ್ತೆಯನ್ನು
ಬಂಟ್ವಾಳ ಕೆದಿಲ ಗ್ರಾಮ ಪಂಚಾಯತಿಗೆ ಒಳಪಟ್ಟ ಪಾಟ್ರಕೋಡಿಯ ಕೋಡಿ ರಸ್ತೆ ಇದು, ಈ ರಸ್ತೆಯು ಹಲವಾರು ವರ್ಷಗಳಿಂದ ಹದಗೆಟ್ಟು ನಡೆಯಲಾಗದ ಈ ಸ್ಥಿತಿಯಲ್ಲಿದೆ.
“ಈ ರಸ್ತೆಯು ಹಲವು ವರ್ಪಗಳಿಂದ ಮಳೆಗಾಲದಲ್ಲಿ ಈ ರೀತಿ ಕೇಸರಾಗಿ ವಾಹನಗಳಿಗೆ ಮಾತ್ರವಲ್ಲದೆ ಸ್ಥಳಿಯ ನಿವಾಸಿಗಳಿಗೆ ಸಂಚಾರಿಸಲು ಅಸಾದ್ಯವಾಗಿದು ಈ ಸಮಸ್ಯೆಯನ್ನು ಸ್ಥಳೀಯ. ಗ್ರಾಮ ಪಂಚಾಯತ್ ಹಾಗು ಪಂಚಾಯತ್ ಸದಸ್ಯರುಗಳಿಗೆ ಮನವಿ ಸಲ್ಲಿಸಿ ವರ್ಷಗಳಾಗಿವೆ, ಅವರು ಈ ರಸ್ತೆಯನ್ನು ಅಭಿವೃದ್ಧಿಪಡಿಸುದಾಗಿ ಭರವಸೆಯನ್ನು ನೀಡಿದರು, ಅದರೆ ಈ ರಸ್ತೆಯ ಅಭಿವೃದ್ಧಿಯ ಕನಸು, ಕನಸಾಗಿಯೇ ಉಳಿದಿದೆ, ಈ ರಸ್ತೆಯನ್ನು ಹೇಳುವವರಿಲ್ಲ ಕೇಳುವವರಿಲ್ಲವೆಂದು” ಸ್ಥಳಿಯ ಕೋಡಿ ನಿವಾಸಿಯು, ಈ ರಸ್ತೆಯಲ್ಲಿ ಸಂಚಾರಿಸುವ ಅಯ್ಯೂಬ್ ಕೋಡಿರವರು ನುಡಿದರು”
ಈ ರಸ್ತೆಯಲ್ಲಿ ಈ ಮಳೆಗಾಲದಲ್ಲಿ ಪಾದಚಾರಿಗಳಿಗೆ ಹಾಗು ವಾಹನಗಳಿಗೆ ಸಂಚರಿಸಲು ಸಂಬಂಧಪಟ್ಟವರು ಪ್ರಯತ್ನಿಸುವರೆ! ಎಂಬುದು ಯಕ್ಷ ಪ್ರಶ್ನೆ
✍️ ಅಬ್ದುಲ್ ಖಾದರ್ ಪಾಟ್ರಕೋಡಿ