ಕೊಣಾಜೆ: ಶಾಲಾ ಪರಿಸರದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ನಡೆಸಲು ಅನುಮತಿ ನೀಡಿದ ಬಾಳೆಪುಣಿ ಗ್ರಾಮ ಪಂಚಾಯತ್ ಕಚೇರಿಗೆ ಶಾಲಾ ವಿದ್ಯಾರ್ಥಿಗಳು ಮುತ್ತಿಗೆ ಹಾಕಿದ ಘಟನೆ ನಡೆದಿದೆ.
ಮಂಗಳೂರು ತಾಲೂಕಿನ ಕೊಣಾಜೆ ಬಳಿಯ ಬಾಳೆಪುಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಳೆಪುಣಿ ಶಾರದಾ ಗಣಪತಿ ವಿದ್ಯಾಲಯದ ನೂರಾರು ವಿದ್ಯಾರ್ಥಿಗಳ ಕಾನೂನು ಉಲ್ಲಂಘಿಸಿ ಪಂಚಾಯತ್ ಪರವಾನಗಿ ನೀಡಿರುವ ವಿಚಾರವಾಗಿ ಪ್ರತಿಭಟನೆ ನಡೆಸಿದ್ದಾರೆ.
ನೂರು ಮೀಟರ್ ಆವರಣದಲ್ಲಿ ಮದ್ಯ ಮಾರಾಟ ನಿಷೇಧ ಇದ್ದರೂ ಅಕ್ರಮ ಲೈಸನ್ಸ್ ನೀಡಿದ್ದಾರೆ. ಕೇರಳ – ಕರ್ನಾಟಕ ಗಡಿಯಲ್ಲಿ ತರಾತುರಿಯಲ್ಲಿ ಬಾರ್ ಓಪನ್ ಮಾಡಿರುವ ಖಾಸಗಿ ಲಾಬಿದಾರರು, ಶಾಲಾ ಆವರಣದ 15 ಮೀಟರ್ ಅಂತರದಲ್ಲಿ ಅಕ್ರಮ ಮದ್ಯ ಮಾರಾಟ ಆರಂಭ ಮಾಡಿದ್ದಾರೆ, ಕೂಡಲೇ ಬಾರ್ ಸ್ಥಳಾಂತರ ಮಾಡುವಂತೆ ಶಾಲಾ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸಿದ್ದಾರೆ.