Home ತಾಜಾ ಸುದ್ದಿ ಶಿಕ್ಷಣ ಸಚಿವ ‘ಪ್ರೇಮ್ ಸಾಯಿ ಸಿಂಗ್’ ರಾಜೀನಾಮೆ

ಶಿಕ್ಷಣ ಸಚಿವ ‘ಪ್ರೇಮ್ ಸಾಯಿ ಸಿಂಗ್’ ರಾಜೀನಾಮೆ

0

ಛತ್ತೀಸ್ ಗಢದ ಶಿಕ್ಷಣ ಸಚಿವ ಪ್ರೇಮ್ ಸಾಯಿ ಸಿಂಗ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ರಾಜೀನಾಮೆ ಬಗ್ಗೆ ಹಲವು ಸುದ್ದಿಗಳು ಹರಿದಾಡ್ತಿದ್ದು, ಸಿಂಗ್ ಅವರ ರಾಜೀನಾಮೆಯನ್ನ ಕೋರಲಾಗಿದೆ ಮತ್ತು ಸ್ವತಃ ಅವ್ರೇ ರಾಜೀನಾಮೆ ನೀಡಿಲ್ಲ ಎಂದು ಹೇಳಲಾಗ್ತಿದೆ.

ರಾಜೀನಾಮೆ ಅಂಗೀಕಾರವಾದ ಬಳಿಕ ಪ್ರೇಮ್ ಸಾಯಿ ಸಿಂಗ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಅವರ ಮುಖದಲ್ಲಿ ದುಃಖ ಸ್ಪಷ್ಟವಾಗಿ ಕಾಣುತ್ತಿತ್ತು. ಪ್ರೇಮ್ ಸಾಯಿ ಸಿಂಗ್ ಬದಲಿಗೆ ಮೋಹನ್ ಮಾರ್ಕಮ್ ಅವರನ್ನ ರಾಜ್ಯದ ಶಿಕ್ಷಣ ಸಚಿವರನ್ನಾಗಿ ಮಾಡಬಹುದು ಅನ್ನೋ ಮಾಹಿತಿ ಸಿಕ್ಕಿದೆ.

ಕುತೂಹಲದ ಸಂಗತಿಯೆಂದರೆ ಇದಕ್ಕೂ ಮುನ್ನ ಬುಧವಾರ (ಜುಲೈ 12) ಮೋಹನ್ ಮಾರ್ಕಂ ಅವರ ಸ್ಥಾನಕ್ಕೆ ಬಸ್ತಾರ್‌ನ ಲೋಕಸಭಾ ಸಂಸದ ದೀಪಕ್ ಬೈಜ್ ಅವರನ್ನ ಕಾಂಗ್ರೆಸ್ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ.

LEAVE A REPLY

Please enter your comment!
Please enter your name here