ಮಂಗಳೂರು: ಶಿವಾನಂದ ಶೆಟ್ಟಿ ಮಂಗಲ್ಪಾಡಿ ಸಾರಥ್ಯದಲ್ಲಿ, ಕುಸಲ್ದರಸೆ ನವೀನ್ ಡಿ. ಪಡೀಲ್ ಸಲಹೆ ಸಹಕಾರದೊಂದಿಗೆ ,ರಂಗ್ ದ ರಾಜೆ ಸುಂದರ್ ರೈ ಮಂದಾರ ನಿರ್ದೇಶನದಲ್ಲಿ, “ಅಮ್ಮ ಕಲಾವಿದೆರ್ ಕುಡ್ಲ” ಅಭಿನಯದ “ಪರಕೆ ಪೂವಕ್ಕೆ ” “ಗಿರಿಗಿಟ್ ಗಿರಿಧರೆ,” “ಅಲೇ ಬುಡಿಯೆರ್ ಗೆ” ಯಶಸ್ವಿ ನಾಟಕಗಳ ನಂತರ ಮುಂದಿನ ರಂಗ ಪಯಣಕ್ಕೆ ಮಂಗಳೂರಿನ ಶರವು ಶ್ರೀ ಮಹಾ ಗಣಪತಿ ದೇವರ ಸನ್ನಿಧಿಯಲ್ಲಿ ಹೊಸ ಸಾಂಸಾರಿಕ ತುಳು ಹಾಸ್ಯಮಯ ನಾಟಕ “ಅಮ್ಮೆರ್” ಇದರ ಶುಭಮಹೂರ್ತ ಇಂದು ನಡೆಯಿತು.
ಈ ನಡುವೆ ಶಾರದಾ ಆರ್ಟ್ಸ್ ತಂಡದಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿದ್ದ ಕಲಾವಿದರಾದ ಕಾಂತಾರ ಖ್ಯಾತಿಯ ದೀಪಕ್ ರೈ ಪಾಣಾಜೆ, ಸುಂದರ್ ರೈ ಮಂದಾರ ಇವರ ನೇತೃತ್ವದಲ್ಲಿ “ಅಮ್ಮ ಕಲಾವಿದರ್” ತಂಡಕ್ಕೆ ಸೇರ್ಪಡೆಗೊಂಡಿದ್ದು ಇನ್ನಷ್ಟು ಜನರಿಗೆ ಮನೋರಂಜನೆ ನೀಡಲು ತಂಡಕ್ಕೆ ಬಲ ಬಂದಿದೆ, ಹಾಗೇಯೇ ಮುಂಬರುವ ದಿನಗಳಲ್ಲಿ ಬರುವ ಅಮ್ಮ ತಂಡದ ಎಲ್ಲಾ ನಾಟಕಗಳಲ್ಲಿ ದೀಪಕ್ ರೈ ಪಾಣಾಜೆ ನಟಿಸಲಿದ್ದಾರೆ.
ನಾಟಕ ರಚನೆಯ ಜವಾಬ್ದಾರಿ ಸೋಮನಾಥ ಶೆಟ್ಟಿ ಮಂಗಲ್ಪಾಡಿ ವಹಿಸಿದ್ದು , ನಿರ್ದೇಶನವನ್ನು ರಂಗ್ ದ ರಾಜೇ ಸುಂದರ್ ರೈ ಮಂದಾರ ಮಾಡಲಿದ್ದಾರೆ. ಈ ಸಂಧರ್ಭದಲ್ಲಿ ಲಯನ್ ಕಿಶೋರ್ ಡಿ ಶೆಟ್ಟಿಯವರು ಭಾಗವಹಿಸಿ ತಂಡಕ್ಕೆ ಶುಭ ಹಾರೈಸಿದರು, ಅಂತೆಯೇ ಹಿರಿಯ ರಂಗಕರ್ಮಿ ವಸಂತ್ ವಿ ಅಮೀನ್, ನವೀನ್ ಶೆಟ್ಟಿ ಅಳಕೆ ಹಾಗೂ ಅಮ್ಮ ತಂಡದ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರು ಪಾಲ್ಗೊಂಡಿದ್ದರು.