ಪ್ರಾರಂಭದಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದ ಗ್ರಾಹಕರ ಅರ್ಜಿಗಳು ತಿರಸ್ಕೃತಗೊಂಡಿವೆ. ಮೊದಲ ಎರಡು ದಿನ ಅರ್ಜಿ ಸಲ್ಲಿಕೆಯಲ್ಲಿ ತಾಂತ್ರಿಕ ಲೋಪ ಉಂಟಾಗಿತ್ತು.
ತಾಂತ್ರಿಕ ಲೋಪದಿಂದಾಗಿ ಅರ್ಜಿ ಸ್ವೀಕಾರ ಆಗಿದರೂ ಟ್ರ್ಯಾಕಿಂಗ್ನಲ್ಲಿ ಮತ್ತೆ ಅರ್ಜಿ ಸಲ್ಲಿಸಿ ಎಂದು ಸಂದೇಶ ಬರುತ್ತಿದೆ.
ಹಾಗಾಗಿ ಜೂನ್ 18, 19ರಂದು ಎರಡು ದಿನ ಸಲ್ಲಿಸಿದವರು ಒಮ್ಮೆ ಸ್ಟೇಟಸ್ ಚೆಕ್ ಮಾಡಿಕೊಳ್ಳೋದು ಉತ್ತಮ.ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲು ಮೊದಲ ಎರಡು ದಿನ 1.61 ಲಕ್ಷ ಗ್ರಾಹಕರು ಅರ್ಜಿ ಸಲ್ಲಿಕೆ ಮಾಡಿದ್ದರು. ಆರಂಭಿಕ ಹಂತದಲ್ಲಿ ಅರ್ಜಿ ಸಲ್ಲಿಸಲು ಬಹಳಷ್ಟು ಸಮಯ ತೆಗೆದುಕೊಂಡಿತ್ತು.ಮೊದಲ ವಾರ ಸರ್ವರ್ ಡೌನ್ ಕೂಡ ಆಗಿತ್ತು. ಈ ವೇಳೆ ಹಾಕಿದ ಅರ್ಜಿಗಳು ಲಿಂಕ್ ಆಗದೇ ಉಳಿದಿರೋ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.ನೀವೇನಾದ್ರೂ ಮೊದಲ ಎರಡು ದಿನದಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ರೇ ಈ ಲಿಂಕ್ ಮೂಲಕ ನಿಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳಿ ಎಂದು ಸಲಹೆ ನೀಡಲಾಗಿದೆ.https://sevasindhu.karnataka.gov.in/StatucTrack/Track_Status ಈ ಲಿಂಕ್ ಮೂಲಕ ನೀವು ಅರ್ಜಿಯ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.ಜೂನ್ 18 ಮತ್ತು 19ರ ಆನಂತರ ಎರಡು ದಿನದಲ್ಲೂ ಶೇ.50ರಷ್ಟು ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಹೇಳಲಾಗ್ತಿದೆ. ಜೂ 20, 21ರಂದು ಅರ್ಜಿ ಸಲ್ಲಿಕೆ ಮಾಡಿದ್ರೆ ಒಮ್ಮೆ ಸ್ಟೇಟಸ್ ಪರಿಶೀಲಿಸಿಕೊಳ್ಳಿ.ಒಂದು ವೇಳೆ ನಿಮ್ಮ ಅರ್ಜಿಗಳು ಸ್ವೀಕೃತಗೊಳ್ಳದಿದ್ರೆ ಆಗಸ್ಟ್ ತಿಂಗಳಲ್ಲಿ ಕರೆಂಟ್ ಬಿಲ್ ಕಟ್ಟಬೇಕಾಗುತ್ತದೆ. ಇಲ್ಲಿಯವರೆಗೆ 1.02 ಕೋಟಿ ಅರ್ಜಿಗಳು ಸಲ್ಲಿಕೆಯಾಗಿವೆ. ರಾಜ್ಯದಲ್ಲಿ ಒಟ್ಟು 2.14 ಕೋಟಿ ಫಲಾನುಭವಿಗಳಿದ್ದಾರೆ.
To check the