Home ತಾಜಾ ಸುದ್ದಿ ಖಲಿಸ್ತಾನಿ ಭಯೋತ್ಪಾದಕರ `ಮೋಸ್ಟ್ ವಾಂಟೆಡ್ ಪಟ್ಟಿ’ಗೆ 21 ಹೆಸರು ಸೇರಿಸಿದ `NIA’

ಖಲಿಸ್ತಾನಿ ಭಯೋತ್ಪಾದಕರ `ಮೋಸ್ಟ್ ವಾಂಟೆಡ್ ಪಟ್ಟಿ’ಗೆ 21 ಹೆಸರು ಸೇರಿಸಿದ `NIA’

0

ನವದೆಹಲಿ : ಕೇಂದ್ರ ತನಿಖಾ ಸಂಸ್ಥೆ (NIA) ವಿದೇಶದಲ್ಲಿರುವ ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ಮಹತ್ವದ ಕ್ರಮ ಕೈಗೊಂಡಿದ್ದು, ಸುಮಾರು 21 ಖಲಿಸ್ತಾನಿಗಳ ಹೆಸರುಗಳನ್ನು ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ದಾಖಲಿಸಲಾಗಿದೆ. ಈ ಖಲಿಸ್ತಾನಿಗಳ ಹೆಸರುಗಳನ್ನು ಫೋಟೋದೊಂದಿಗೆ ಎನ್‌ಐಎ ವೆಬ್ ಸೈಟ್ ನಲ್ಲಿ ಹಾಕಲಾಗಿದೆ.


ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯಿಂದ ಪಲಾಯನಗೈದ ಗುರ್ಪತ್ವಂತ್ ಸಿಂಗ್ ಪನ್ನುನ್ ಹೆಸರು ತನಿಖಾ ಸಂಸ್ಥೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಹೇಳಲಾಗುತ್ತಿದೆ.ಲಖ್ಬೀರ್ ಸಿಂಗ್ ಲಾಂಡಾ, ಮಂದೀಪ್ ಸಿಂಗ್, ಸತ್ನಾಮ್ ಸಿಂಗ್, ಅಮ್ರಿಕ್ ಸಿಂಗ್ ಸೇರಿದಂತೆ ಕೆನಡಾ, ಅಮೆರಿಕ ಮತ್ತು ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ಹೆಸರುಗಳು ಈ ಪಟ್ಟಿಯಲ್ಲಿವೆ. ತನಿಖಾ ಸಂಸ್ಥೆಯ ಐದು ಸದಸ್ಯರ ತಂಡ ಶೀಘ್ರದಲ್ಲೇ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳಿ ಭಾರತೀಯ ರಾಯಭಾರ ಕಚೇರಿಯ ಮೇಲಿನ ದಾಳಿಯ ಬಗ್ಗೆ ತನಿಖೆ ನಡೆಸಲಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

20-25 ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ಲುಕ್ ಔಟ್ ನೋಟಿಸ್

ಮಾಹಿತಿಯ ಪ್ರಕಾರ, ಸಿಖ್ಸ್ ಫಾರ್ ಜಸ್ಟೀಸ್ (SFJ), ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (BKI), ಖಲಿಸ್ತಾನಿ ಲಿಬರೇಶನ್ ಫೋರ್ಸ್ (KLF), ಖಲಿಸ್ತಾನ್ ಟೈಗರ್ ಫೋರ್ಸ್ (KTF), ಖಲಿಸ್ತಾನ್ ಜಿಂದಾಬಾದ್ ಫೋರ್ಸ್ (KZF), ಖಲಿಸ್ತಾನ್ ಕಮಾಂಡೋ ಫೋರ್ಸ್ (KCF), ಇಂಟರ್ನ್ಯಾಷನಲ್ ಸಿಖ್ ಯೂತ್ ಫೆಡರೇಶನ್ (ISYF) ಮತ್ತು ದಾಲ್ ಖಾಲ್ಸಾ ಇಂಟರ್ನ್ಯಾಷನಲ್ (DKI) ಸದಸ್ಯರ ಪಟ್ಟಿಯನ್ನು ಎನ್‌ಐಎ ಸಿದ್ಧಪಡಿಸಿದೆ. ಇದಲ್ಲದೆ, 20 ರಿಂದ 25 ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ಲುಕ್ ಔಟ್ ಸುತ್ತೋಲೆ ಹೊರಡಿಸಲಾಗಿದೆ.

LEAVE A REPLY

Please enter your comment!
Please enter your name here