Home ಕರಾವಳಿ ವಿಟ್ಲ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ

ವಿಟ್ಲ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ

0

ಪುತ್ತೂರು: ಭವಿಷ್ಯದ ಬಗ್ಗೆ ವಿದ್ಯಾರ್ಥಿಗಳು ಕನಸು ಕಾಣಬೇಕು, ನಾನು ಮುಂದೆ ಏನಾಗಬೇಕು ಎಂಬುದರ ಬಗ್ಗೆ ದೊಡ್ಡ ಕನಸು ಕಾಣಬೇಕು, ಗುರಿಯಿಲ್ಲದ ಜೀವನದಿಂದ ಯಶಸ್ಸು ಕಾಣಲು ಸಾಧ್ಯವಿಲ್ಲ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.


ದುಡ್ಡಿದ್ದವ ಮಾತ್ರ ಯಶಸ್ಸು ಕಾಣುತ್ತಾನೆ ಎಂಬ ಮನೋಭಾವ ಬಿಟ್ಟು ಬಿಡಬೇಕು. ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ. ಇಂಗ್ಲೀಷ್ ಮತ್ತು ಹಿಂದಿ ಭಾಷಾ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಮೂಲಕ ಆತದಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಎಂದಿಗೂ ಧೈರ್ಯ ಕುಂದಬಾರದು. ನಾನು ಸಮಾಜದ ದೊಡ್ಡ ವ್ಯಕ್ತಿಯಾಗಬೇಕು ಎಂಬ ಉದ್ದೇಶ, ಕನಸು ನಿಮ್ಮಲ್ಲಿರಬೇಕು ಎಂದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.
ತಾನು ಕಷ್ಟದಿಂದಲೇ ಕಾಲೇಜು ಶಿಕ್ಷಣ ಪಡೆದಿದೆ. ಸೈಕಲಲ್ಲಿ ಜ್ಯೂಸ್ ,ಬ್ರೆಡ್ ಮಾರುವ ಮೂಲಕ ಹಣ‌ಸಂಪಾದಿಸಿ ವಿದ್ಯೆ ಕಲಿತೆ. ಆ ಬಳಿಕ ನಾನು ಶಿಕ್ಷಣದ ಜೊತೆಗೆ ಉದ್ಯಮವನ್ನೂ ಆರಂಭಿಸಿ ಅದರಲ್ಲಿ ಯಶಸ್ವಿಯಾದೆ. ಪ್ರಾಮಾಣಿಕತೆ ಮತ್ತು ಆತ್ಮಸ್ಥೈರ್ಯ ಇದ್ದರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಶಾಸಕರು ಹೇಳಿದರು.


ಜೀವನದಲ್ಲಿ ಶಿಸ್ತು ಮುಖ್ಯವೇ ವಿನ ಹಣವಲ್ಲ. ಕೇವಲ ಹಣ ಇದ್ದ ಮಾತ್ರಕ್ಕೆ ಸಂಪಾದನೆ ಮಾಡಲು ಸಾಧ್ಯವಿಲ್ಲ. ಸಂಸ್ಕಾರ ಮತ್ತು ಒಳ್ಳೆಯ ತನ ನಮ್ಮಲ್ಲಿರಬೇಕಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಾಂಶುಪಾಲ ಪದ್ಮನಾಭ , ಅರ್ಥ ಶಾಸ್ತ್ರಜ್ಞರಾದ ಪ್ರೊ.ಶಾಂತರಾಮ , ನಿವೃತ್ತ ಉಪನ್ಯಾಸಕಿ ಪ್ರೊ.ಚಕ್ರೇಶ್ವರಿ , ವಿದ್ಯಾರ್ಥಿ ಕ್ಷೇಮಪಾಲಕ ಸುಜಾತಾ, ಆಂತರಿಕ ಗುಣಮಟ್ಟ ಪರೀಕ್ಷ ಸಂಚಾಲಕ ಪರಮೇಶ್ವರಿ ಸ್ನಾತಕೋಸ್ಕರ ಸಂಘದ ಕಾರ್ಯದರ್ಶಿ ಹರ್ಷಿತಾ, ದೀಪಿಕಾ, ಮನುಶ್ರೀ,ಗೀತಿಕಾ ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕಿ ಸೌಮ್ಯಾ ಎಚ್ ಸ್ವಾಗತಿಸಿದರ. ಉಪನ್ಯಾಸಕ ಪ್ರಭಾಕರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತ ಮಂಡಳಿ,ಪೋಷಕ ಹಾಗೂ ವಿದ್ಯಾರ್ಥಿಗಳ ಪರವಾಗಿ ಸನ್ಮಾನ ಮಾಡಲಾಯಿತು.

LEAVE A REPLY

Please enter your comment!
Please enter your name here