ಮಂಗಳೂರು: ಯುವ ದೇವಾಂಗ, ಶ್ರೀ ಕ್ಷೇತ್ರ ಕುಕ್ಕಾಡಿ ಅಶೋಕನಗರ , ಮಂಗಳೂರು ಇದರ ವತಿಯಿಂದ ಅಧ್ಯಕ್ಷರಾದ ಶ್ರೀ ಸುನಿಲ್ ಅಶೋಕನಗರ ಇವರ ನೇತೃತವದಲ್ಲಿ ದೇವಾಂಗ ಸಮಾಜದ ಪ್ರತಿಭೆಗಳಿಗೆ ಅವಕಾಶ ನೀಡುವ ಸಲುವಾಗಿ “ವಾಯ್ಸ್ ಆಫ್ ದೇವಾಂಗ” ಎನ್ನುವ ಗಾಯನ ಸ್ಪರ್ಧೆಯನ್ನು ಆಯೋಜಿಸಿದ್ದು ಇದೇ ಬರುವ ಜುಲೈ 16 ಆದಿತ್ಯವಾರ ಬೆಳಿಗ್ಗೆ 09:30 ರಿಂದ ಮಧ್ಯಾಹ್ನ 01:30 ರವರೆಗೆ ದೇವಾಂಗ ಭವನ , ಅಶೋಕನಗರ ಇಲ್ಲಿ ನಡೆಯಲಿದೆ. ಸುನಿಲ್ ರವರ ಅಧ್ಯಕ್ಷತೆಯಲ್ಲಿ ಈಗಾಗಲೇ ಹಲವಾರು ಯಶಸ್ವಿ ಕಾರ್ಯಕ್ರಮಗಳು ನಡೆದಿದ್ದು ಈ ಭಾರಿ ದೇವಾಂಗ ಸಮಾಜದ ಗಾಯನ ಪ್ರತಿಭೆಗಳಿಗೆ ಒಂದು ಒಳ್ಳೆ ಅವಕಾಶ ನೀಡಲಾಗಿದೆ. ಗಾಯನ ಸ್ಪರ್ಧೆ ಜೂನಿಯರ್ ಹಾಗೂ ಸೀನಿಯರ್ ಎರಡು ವಿಭಾಗಗಳಲ್ಲಿ ನಡೆಯಲಿದ್ದು ವಯೋಮಿತಿ 4 ರಿಂದ 16 ವರ್ಷದ ಮಕ್ಕಳಿಗೆ ಜೂನಿಯರ್ ವಿಭಾಗ, 16 ವರ್ಷ ಮೇಲ್ಪಟ್ಟವರಿಗೆ ಸೀನಿಯರ್ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಇದೆ.
ಈ ಸ್ಪರ್ಧೆಯ ತೀರ್ಪುಗಾರರಾಗಿ ಕರಾವಳಿಯ ಹೆಸರಾಂತ ಗಾಯಕರಾದ ಪ್ರಶಾಂತ್ ಕಂಕನಾಡಿ ಹಾಗೂ ಗಾಯಕಿ ಮಹಿಮಾ ಭಂಡಾರಿಯವರು ಭಾಗವಹಿಸಲಿದ್ದಾರೆ. ಸ್ಪರ್ಧೆಗೆ ಹೆಸರು ನೊಂದಾಯಿಸುವವರು ಜುಲೈ 14 ರ ಒಳಗೆ ಹೆಸರು ನೀಡತಕ್ಕದ್ದು ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಮೊಬೈಲ್ ಸಂಖ್ಯೆ: 8147660556, 9845061793