Home ತಾಜಾ ಸುದ್ದಿ ಹೃದಯಾಘಾತದಿಂದ ಮೃತಪಟ್ಟ ಸನ್ಯಾಸಿ ಮನೆಯಲ್ಲಿ 30 ಲಕ್ಷಕ್ಕೂ ಅಧಿಕ ಹಣ ಪತ್ತೆ..!

ಹೃದಯಾಘಾತದಿಂದ ಮೃತಪಟ್ಟ ಸನ್ಯಾಸಿ ಮನೆಯಲ್ಲಿ 30 ಲಕ್ಷಕ್ಕೂ ಅಧಿಕ ಹಣ ಪತ್ತೆ..!

0

ಚಿತ್ರದುರ್ಗ: ಕಳೆದ ವಾರ ಮೃ‍ತಪಟ್ಟಿದ್ದ ಸನ್ಯಾಸಿಯೋರ್ವರ ಮನೆಯಲ್ಲಿ ಬರೊಬ್ಬರಿ 30 ಲಕ್ಷ ನಗದು ಪತ್ತೆಯಾಗಿದೆ.


ಗಂಗಾಧರಯ್ಯ ಶಾಸ್ತ್ರಿ ಅವರ ಮನೆಯಲ್ಲಿ ಬರೋಬ್ಬರಿ 30 ಲಕ್ಷ ನಗದು ಪತ್ತೆಯಾಗಿದೆ.

10, 20, 50, 100, 200, 500 ಮುಖಬೆಲೆಯ ನೋಟುಗಳು ಮನೆಯಲ್ಲಿ ದೊರೆತಿವೆ.ಒಂದು, ಎರಡು, ಐದು ರೂಪಾಯಿ ಮುಖಬೆಲೆಯ ನಾಣ್ಯಗಳ ಮೌಲ್ಯವೇ ಸುಮಾರು 46,000 ರಷ್ಟಿತ್ತು.

ಮನೆಯಲ್ಲಿ ತೆಂಗಿನಕಾಯಿ ರಾಶಿಯ ಕೆಳಗೆ ನೋಟು ತುಂಬಿದ ಹಲವು ಚೀಲಗಳು ಪತ್ತೆಯಾಗಿವೆ. ಮನೆಯ ಅಟ್ಟದ ಮೇಲೆ ಹಣ ತುಂಬಿದ ಕೊಡವೊಂದು ಸಿಕ್ಕಿದೆ ಎನ್ನಲಾಗಿದೆ.

ಗಂಗಾಧರಯ್ಯ ಅವರು ಪಟ್ಟಣದ ಮದಕರಿ ಸರ್ಕಲ್ ಬಳಿಯ ಮನೆಯಲ್ಲಿ ಒಂಟಿ ಜೀವನ ನಡೆಸುತ್ತಿದ್ದರು. ಬ್ರಹ್ಮಚಾರಿಯಾಗಿದ್ದ ಇವರು, ಬೇರೆಯವರು ಮಾಡಿದ ಅಡುಗೆ ಸೇವಿಸುತ್ತಿರಲಿಲ್ಲ. 70ರ ಹರೆಯದಲ್ಲೂ ತಾವೇ ಅಡುಗೆ ಮಾಡಿಕೊಳ್ಳುತ್ತಿದ್ದರು. ಯಾರನ್ನೂ ಮನೆ ಒಳಗೆ ಬಿಟ್ಟುಕೊಳ್ಳುತ್ತಿರಲಿಲ್ಲ. ಚಪ್ಪಲಿ ಕೂಡ ಧರಿಸುತ್ತಿರಲಿಲ್ಲ ಎನ್ನಲಾಗಿದೆ.

ಗಂಗಾಧರಯ್ಯ ಶಾಸ್ತ್ರಿ ಅವರಿಗೆ 4 ಎಕರೆ ತೆಂಗಿನ ತೋಟ, ಗದ್ದೆ ಇದೆ. ಇವರು ಶಾಸ್ತ್ರ ಹೇಳುತ್ತಿದ್ದರು. ಗೃಹಪ್ರವೇಶ ಸೇರಿದಂತೆ ಶುಭಕಾರ್ಯ ಮಾಡಿಸುತ್ತಿದ್ದರು.

LEAVE A REPLY

Please enter your comment!
Please enter your name here