Home ಪ್ರಖರ ವಿಶೇಷ ಹೊಸ ಸುದ್ದಿ ವಾಹಿನಿ “ಪ್ರಖರ ನ್ಯೂಸ್” ನ ಅಧಿಕೃತ ಲಾಂಛನ ಹಾಗೂ ವೆಬ್ ಸೈಟ್ ನ...

ಹೊಸ ಸುದ್ದಿ ವಾಹಿನಿ “ಪ್ರಖರ ನ್ಯೂಸ್” ನ ಅಧಿಕೃತ ಲಾಂಛನ ಹಾಗೂ ವೆಬ್ ಸೈಟ್ ನ ಲೋಕಾರ್ಪಣೆ ಮಾಡಿದ ಕುಕ್ಕೆ ಸುಬ್ರಹ್ಮಣ್ಯ ಮಠದ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ

0

ಹೊಸ ಸುದ್ದಿ ವಾಹಿನಿ “ಪ್ರಖರ ನ್ಯೂಸ್” ನ ಅಧಿಕೃತ ಲಾಂಛನ ಹಾಗೂ ವೆಬ್ ಸೈಟ್ ನ ಲೋಕಾರ್ಪಣೆಯನ್ನು ಇಂದು ಕುಕ್ಕೆ ಸುಬ್ರಹ್ಮಣ್ಯ ಮಠದ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ನೆರವೇರಿಸಿದರು.


ನಂತರ ಮಾತನಾಡಿದ ಸ್ವಾಮಿಜಿಗಳು ಇವತ್ತು ಆಧುನಿಕ ತಂತ್ರಜ್ಞಾನದ ಫಲವಾಗಿ ಜಗತ್ತು ತುಂಬಾ ಹತ್ತಿರವಾಗಿದೆ, ಜಗತ್ತು ತುಂಬಾ ಎತ್ತರಕ್ಕೂ ಬೆಳೆದಿದೆ, ಇವತ್ತು ಪ್ರಪಂಚದಾದ್ಯಂತ ನಡೆಯುವ ಸುದ್ದಿಗಳನ್ನು ಕ್ಷಣಗಳಲ್ಲಿ ನಮ್ಮ ಕಣ್ಣ ಮುಂದೆ ಪಡೆದುಕೊಳ್ಳಲು ಅವಕಾಶ ಇರುವಂತಹ ದಿನಗಳಲ್ಲಿ ನಾವಿದ್ದೇವೆ ಹಾಗಿದ್ದಾಗ ಮನುಷ್ಯನ ಸಹಜವಾದ ಕೂತೂಹಲ ಹಾಗೂ ಲೌಕಿಕ ಜ್ಞಾನವನ್ನು ಬೆಳೆಸಲು ಬೇರೆ ಬೇರೆ ಮಾದ್ಯಮಕ್ಕೆ ಅವಲಂಬಿತರಾಗಿದ್ದಾರೆ ಹಾಗಾಗಿ ಇಂತಹ ವೆಬ್ ಸೈಟ್, ಯುಟ್ಯೂಬ್, ಡಿಜಿಟಲ್ ಮಾಧ್ಯಮಗಳು ಬೆಳೆಯಬೇಕು “ಪ್ರಖರ” ನ್ಯೂಸ್ ಮಾಧ್ಯಮವು ಸಮಾಜ ಉಪಯೋಗಿ ಕಾರ್ಯವನ್ನು ನಡೆಸಿ ಮಾಧ್ಯಮ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿ ಆಶೀರ್ವಾದ ನೀಡಿದರು. ಈ ಸಂಧರ್ಭದಲ್ಲಿ ನಟ ನಿರ್ದೇಶಕರಾದ ಸುಂದರ್ ರೈ ಮಂದಾರ, ನಿರ್ದೇಶಕರಾದ ಪ್ರಜ್ವಲ್ ಕುಮಾರ್ ಅತ್ತಾವರ, ಧನರಾಜ್ ರೈ, ಸಂಜಯ್ ನಾರಾಯಣ, ರಾಜೇಶ್ ಸುಬ್ರಹ್ಮಣ್ಯ, ಶೇಖರ ಸುಬ್ರಹ್ಮಣ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here