Home ಪ್ರಖರ ವಿಶೇಷ ಬಟ್ಟಿ ಭಾಗ್ಯ ಯೋಜನೆಗಳು ಎಂದು ಹಂಗಿಸುವ ಬಲಿತವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಶೋಷಿತರ ಪ್ರತಿನಿಧಿ.

ಬಟ್ಟಿ ಭಾಗ್ಯ ಯೋಜನೆಗಳು ಎಂದು ಹಂಗಿಸುವ ಬಲಿತವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಶೋಷಿತರ ಪ್ರತಿನಿಧಿ.

0
Khadak is a representative of the oppressed who has warned adults who are distributing Batti Bhagya schemes.


ಗಂಗಾವತಿ: ಸರ್ಕಾರದ ಮೂಲ ಉದ್ದೇಶ ದಲಿತರು ಶೋಷಿತರು ಬಡವರನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಸಮ ಸಮಾಜವನ್ನು ನಿರ್ಮಿಸುವ ನಿರ್ಮಿಸುವುದಾಗಿದೆ . ಆದ್ದರಿಂದ ನೂತನ ಕಾಂಗ್ರೆಸ್ ಸರ್ಕಾರ ಬಡವರು, ದಲಿತರು ಮತ್ತು ಮಹಿಳಾ ವರ್ಗವನ್ನು ಮುಖ್ಯವಾಹಿನಿ ತರುವ ಉದ್ದೇಶದಿಂದ ಹಲವು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಇದನ್ನು ಕೆಲವು ಪಟ್ಟಭದ್ರರು ಮತ್ತು ಬಲಿತ ವರ್ಗದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಬಟ್ಟಿ ಭಾಗ್ಯಗಳು ಎಂದು ಹಂಗಿಸುವ ಮೂಲಕ ಬಡವರನ್ನು ದಲಿತರನ್ನು ಶೋಷಿತರನ್ನು ಮಹಿಳೆಯರನ್ನು ಕೀಳಾಗಿ ಕಾಣಲಾಗುತ್ತದೆ. ಇಂತಹ ಮನೋ ದೃಷ್ಟಿ ಇರುವವರಿಗೆ ಸಕಲೇಶಪುರದ ದರ್ಶನ್ ಎನ್ನುವ ವ್ಯಕ್ತಿ ತಾನು ಜೀವನದಲ್ಲಿ ಅನುಭವಿಸಿದ ಕಷ್ಟಗಳನ್ನು ಮತ್ತು ಈಗ ಸರ್ಕಾರ ಅನುಷ್ಠಾನ ಮಾಡುತ್ತಿರುವ ಗ್ಯಾರಂಟಿ ಯೋಜನೆಗಳ ಮೂಲಕ ಮುಖ್ಯ ವಾಹಿನಿಗೆ ಬರಲು ಹೇಗೆ ನೆರವಾಗುತ್ತದೆ ಎಂಬುದನ್ನ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದನ್ನು ಹರಡುವ ಮೂಲಕ ಅಭಿಪ್ರಾಯವನ್ನು
ವ್ಯಕ್ತಪಡಿಸಿದ್ದಾರೆ .ಶತಮಾನಗಳಿಂದ ಬಲಿತ ವರ್ಗದವರು ನಿಮ್ನ ಮತ್ತು ಶೂದ್ರ ವರ್ಗವನ್ನು ಅತ್ಯಂತ ಕೀಳಾಗಿ ಕಾಣುವುದನ್ನು ಹೋಗಲಾಡಿಸಲು ವಿಶ್ವಗುರು ಬಸವಣ್ಣ ಗೌತಮ ಬುದ್ಧ ಹಾಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಅನೇಕ ಧಾರ್ಮಿಕರು ಹಲವು ಕಾರ್ಯಕ್ರಮಗಳನ್ನು ಮತ್ತು ಸಾಮಾಜಿಕ ಕ್ರಾಂತಿಗಳನ್ನು ಮಾಡಿದ್ದಾರೆ .
ಡಾಕ್ಟರ್ ಅಂಬೇಡ್ಕರ್ ಅವರು ಭಾರತ ಸಂವಿಧಾನ ರಚನೆಯ ಸಂದರ್ಭದಲ್ಲಿ ಧ್ವನಿ ಇಲ್ಲದವರಿಗೆ ಧ್ವನಿ ಯಾಗುವಂತಹ ನಿಯಮಗಳನ್ನು ಸಂವಿಧಾನದಲ್ಲಿ ಅಳವಡಿಸಿದ್ದರು. ಸಂವಿಧಾನವನ್ನು ಅನುಷ್ಠಾನ ಮಾಡುವ ಜನರು ತಮ್ಮ ಇಚ್ಛೆಯನ್ನು ಬರಿಗೊತ್ತಿ ಸಮ ಸಮಾಜದ ಕನಸನ್ನು ಕಂಡು ಸಂವಿಧಾನವನ್ನು ಯಥಾವತ್ ಜಾರಿ ಮಾಡುವ ಮೂಲಕ ಕಲ್ಯಾಣ ರಾಜ್ಯ ಸ್ಥಾಪನೆ ಸಾಧ್ಯ ಎಂದು ಹೇಳಿದ್ದರು .ಇದೀಗ ಕಾಂಗ್ರೆಸ್ ನೂತನ ಸರ್ಕಾರ ಅನೇಕ ಗ್ಯಾರಂಟಿ ಯೋಜನೆಗಳ ಮೂಲಕ ಶೋಷಿತ ನಿಮ್ನ ವರ್ಗವನ್ನು ಮುಖ್ಯವಾಗಿ ತರಲು ಕಾರ್ಯಕ್ರಮಗಳನ್ನು ಮಾಡುತ್ತಿದೆ .ಇದನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ ಮಾಡುತ್ತಿದ್ದು ಇವರಿಗೆ ದರ್ಶನ್ ಸಕಲೇಶಪೂರ ಸಮರ್ಥವಾಗಿ ಉತ್ತರ ನೀಡಿದ್ದಾರೆ.


LEAVE A REPLY

Please enter your comment!
Please enter your name here