MLA M R Manjunath advises women to take advantage of our government's free travel scheme.


ವರದಿ :ಬಂಗಾರಪ್ಪ ಸಿ.



ಹನೂರು :ಉಚಿತ ಪ್ರಯಾಣ ನಮ್ಮ ಪ್ರಯಾಣವೆಂದು ಘನ ರಾಜ್ಯ ಸರ್ಕಾರ ಜಾರಿಗೆ ತಂದಿರುವುದು ನಮ್ಮೆಲ್ಲರಿಗೂ ಖುಷಿಯ ವಿಷಯ ಇದರ ಸದೋಪಯೋಗವನ್ನು ರಾಜ್ಯದ ಎಲ್ಲಾ ಮಹಿಳೆಯರು ಪಡೆದು ಕೊಳ್ಳಬೇಕು ಇದೊಂದು ಅರ್ಥಪೂರ್ಣ ವ್ಯವಸ್ತೆಯಾಗಿದೆ ಎಂದು ಹನೂರು ವಿಧಾನಸಭಾ ಕ್ಷೇತ್ರದ ಶಾಸಕ ಎಮ್ ಆರ್ ಮಂಜುನಾಥ್ ತಿಳಿಸಿದರು . ಹನೂರು ಪಟ್ಟಣದಲ್ಲಿ ಸರ್ಕಾರದ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು ರಾಜ್ಯ ಸರ್ಕಾರವು ನುಡಿದಂತೆ ನಡೆದು ಸರ್ಕಾರ ರಚನೆಯಾದ ಇಪ್ಪತ್ತು ದಿನದಲ್ಲೆ ಶಕ್ತಿ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ, ಇದು ಸಂತೋಷಕರ ವಿಷಯ,ಇಂತಹ ಜನಪ್ರಿಯ ಕಾರ್ಯಕ್ರಮಗಳನ್ನುಮುಂದೆ ಬರುವ ಎಲ್ಲಾ ಸರ್ಕಾರಗಳು ಮೊಟಕುಗೊಳಿಸಬಾರದು ಇಂತಹ ಜನಪ್ರಿಯ ಯೋಜನೆಯನ್ನು ಮುಂದುವರಿಸಿದರೆ ಒಳ್ಳೆಯದು , ಅದೇ ರೀತಿಯಲ್ಲಿ ಇನ್ನೂಳಿದ ನಾಲ್ಕು ಕಾರ್ಯಕ್ರಮಗಳನ್ನು ಸಹ ಆದಷ್ಟು ಸೀಗ್ರವಾಗಿ ಆರ್ಥಿಕವಾಗಿ ಹೊರೆಯಾಗದಂತೆ ಜಾರಿಯಾಗಲಿ ಎಂದರು ,ಹಾಗೂ ನಮ್ಮ ಭಾಗದಲ್ಲಿ ಅಭಿವೃದ್ದಿ ಪಥದಲ್ಲಿ ಕೊಂಡೊಯ್ಯಲು ನಾನು ಶ್ರಮಿಸುತ್ತೆನೆ ಎಲ್ಲಾರ ಸಹಕಾರ ಅಗತ್ಯ ಎಂದರು .
ಇದೇ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾಯಿತಿ ಸದಸ್ಯ ಸುದೇಶ್ ಮಾತನಾಡಿ ನಮ್ಮ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದು ಕೆಲವೆ ದಿನಗಳಲ್ಲಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ,ಇದರ ಪ್ರಯೋಜನವನ್ನು ಜನರು
ರಾಜ್ಯದೊಳಗೆ ಸಂಚಾರ ಮಾಡಬಹುದು , ಮಹಿಳೆಯರು ಟಿಕೆಟ್ ತೆಗೆದುಕೊಳ್ಳಬೇಕು, ದೂರದ ಪ್ರಯಾಣಕ್ಕೆ ತೆರಳಿ ಮದ್ಯದಲ್ಲಿ ಇಳುಗುವಂತಿಲ್ಲ ,ಎಲ್ಲೆಂದರಲ್ಲಿ ಇಳಿಯುವಂತಿಲ್ಲ ,ಆದಾರ್ ,ವೋಟರ್ ಐಡಿ ತೋರಿಸಿ ಪ್ರಯಾಣ ಮಾಡಬಹುದು ಇಂತಹ ಯೋಜನೆಯನ್ನು ಸಿ ಎಮ್ ಹಾಗೂ ಡಿಸಿಎಮ್ ಇಂದು ಚಾಲನೆ ನೀಡಿದ್ದಾರೆ ಇದರ ಪ್ರಯೋಜನವನ್ನು ಸದ್ಭಳಕೆ ಮಾಡಿಕೋಳ್ಳಿ ಎಂದರು . ಇದೇ ಸಂದರ್ಭದಲ್ಲಿ
ಪಟ್ಟಣ ಪಂಚಾಯಿತಿ ಅಧಿಕಾರಿ ಮಹೇಶ್ ಕುಮಾರ್ , ಇ ಒ. ಎಂ. ಶ್ರೀನಿವಾಸ್ ,ಉಪಾ ತಹಸಿಲ್ದಾರ್ ದನಾಂಜಯ್ , ಡಿ ಎಮ್ ಇ ಸೂರ್ಯಕಾಂತ್ ,
ಪ ಪ ಸದಸ್ಯರುಗಳಾದ ,ಆನಂದ್ ಕುಮಾರ್ .ಸಂಪತ್ ಕುಮಾರ್ ,ಮಹೇಶ್ ಹಾಗೂ ಮುಖಂಡರುಗಳಾದ ಮಂಜೇಶ್ ಸೇರಿದಂತೆ ಇತರರು ಹಾಜರಿದ್ದರು.

