Home ಪ್ರಖರ ವಿಶೇಷ ಬುಡಕುಂಟಿ ಗ್ರಾಮದಲ್ಲಿ ಕುಡಿಯುವ ನೀರಿನ ಪರಿಶೀಲನೆ

ಬುಡಕುಂಟಿ ಗ್ರಾಮದಲ್ಲಿ ಕುಡಿಯುವ ನೀರಿನ ಪರಿಶೀಲನೆ

0
Inspection of drinking water in Budakunti village


ಮಾಟಲದಿನ್ನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬುಡಕುಂಟಿ ಗ್ರಾಮದಲ್ಲಿ ನೀರು ಸೇವನೆಯಿಂದ ಜನರಿಗೆ ವಾಂತಿ ಬೇದಿ ಕಾಣಿಸಿಕೊಂಡಿದೆ ಎಂಬ ಅನುಮಾನಾಸ್ಪದ ಪ್ರಕರಣಗಳ ಆಧಾರವಾಗಿ ನೀರು ಪರಿಶೀಲನೆ ಮಾಡಿರುವ ಕುರಿತು.


ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ಇಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಎಂಜಿನೇಯರ್ ರಿಜ್ವಾನ್ ಬೇಗಂ ಮತ್ತು ಮಾಟಲದಿನ್ನಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಗೋಣೆಪ್ಪ ಹನಮಗೌಡ ಜಿರ್ಲಿ ಹಾಗು ನೀರು ಪರಿಕ್ಷಾ ಪ್ರಯೋಗಾಲಯದ ರಸಾಯನಿಕ ತಜ್ಞರಾದ ಮಾರುತೇಶ್ ಬಿ.ಎನ್. ಹಳ್ಳಿ ಹಾಗು ಬಸವರಾಜ ಹೂಗಾರ, ಆದಪ್ಪ ಕಬ್ಬಿಣದ ಇವರು ಬುಡಕುಂಟಿ ಗ್ರಾಮಕ್ಕೆ ಭೇಟಿ ನೀಡಿ,
ಆರೋಗ್ಯ ಇಲಾಖೆ ಮತ್ತು ಆಶಾ ಕಾರ್ಯಕರ್ತೆಯರು ಹಾಗು ವಾಟರ್ ಮ್ಯಾನ್ ‘ಗಳ ಸಂಯೋಗದೊಂದಿಗೆ ನೀರಿನ ಮೂಲಗಳ ಸ್ಥಳ ವಿಕ್ಷಿಸಿ, ಬೋರ್’ವೆಲ್ ಸುತ್ತ ನೈರ್ಮಲ್ಯತೆಯನ್ನ ಪರಿಶೀಲಿಸಲಾಯಿತು. ಗ್ರಾಮದಲ್ಲಿ ಒಟ್ಟು ಎರಡು ಬೋರ್’ವೆಲ್ ಮತ್ತು ಒಂದು ಶುದ್ಧಿಕರಣ ಘಟಕ ಇದ್ದು, ಎರಡು ಬೋರ್’ವೆಲ್ ಗಳ ಮೂಲಕ ನೀರು ಸರಬರಾಜು ಆಗುತ್ತಿದ್ದು, ಶುದ್ಧಿಕರಣ ಘಟಕವು ತಾಂತ್ರಿಕ ದೋಷದಿಂದ ಸ್ಥಿಗಿತಗೊಂಡಿದೆ. ಇನ್ನುಳಿದ ಎರಡು ಬೋರ್’ವೆಲ್ ಗಳು ಅಂದರೆ 1) ಶಾಲೆಯ ಆವರಣದೊಳಗೆ 2) ಕುರುಬನಾಳ ರಸ್ತೆ ಬದಿ ಇರುವ ಬೋರ್’ವೆಲ್ ಮೂಲಕ ಜನ ಸಮುದಾಯಕ್ಕೆ ನೀರು ಸರಬರಾಜು ಆಗುತ್ತಿದೆ. ಈ ಎರಡು ನೀರಿನ ಮೂಲಗಳ ಸ್ಥಳದಲ್ಲಿನ ನೀರು ಮತ್ತು ವಾಂತಿ ಬೇದಿ ಗೆ ಕಾರಣವಾಗಿರುವ ಮನೆಯವರ ನೀರು ಸಂಗ್ರಹಿಸಿ ಗ್ರಾಮಸ್ಥರ ಸಮ್ಮುಖದಲ್ಲಿ ಮನೆ ಮನೆಗೆ ಭೇಟಿ ನೀಡಿ ರಸಾಯನಿಕ ಪರಿಕರಣಗಳ ಕಿಟ್ ಮೂಲಕ ಪರಿಕ್ಷಿಸಿದಾಗ ನೀರಿನ ಗುಣಮಟ್ಟವು ಪ್ರಾಥಮಿಕ ವರದಿ ಪ್ರಕಾರ ಕುಡಿಯಲು ಯೋಗ್ಯತೆ ಕಂಡು ಬಂದಿತು. ಪ್ರಾಥಮಿಕ ಪರಿಶೀಲನೆಯ ವರದಿ ಪ್ರಕಾರ ನೀರು ಕುಡಿಯಲು ಯ್ಯೋಗ್ಯವಾಗಿದೆ ಎಂಬುದನ್ನ ಸಾರ್ವಜನಿಕವಾಗಿ ತಿಳಿಸಲಾಯಿತು. ಗ್ರಾಮದಲ್ಲಿ ನೈರ್ಮಲ್ಯತೆಯ ಬಗ್ಗೆ ತಮ್ಮ ತಮ್ಮ ಮನೆಯ ಸುತ್ತ ಸುಚಿತ್ವತೆ ಕಾಪಾಡಿಕೊಳ್ಳಲು ಈ ಮೂಲಕ ತಿಳಿಸಲಾಯಿತು. ತಾಂತ್ರಿಕ ದೋಷದಿಂದ ಸ್ಥಿಗಿತಗೊಂಡಿದ್ದ ಶುದ್ಧಿಕರಣ ಘಟಕವನ್ನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸ್ಥಳದಲ್ಲೆ ನಿಂತು ಸರಿಪಡಿಸಿ, ಜನ ಸಮುದಾಯಕ್ಕೆ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಲಾಯಿತು.
ಈ ಒಂದು ಕಾರ್ಯದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ AEE ರಿಜ್ವಾನ್ ಬೇಗಂ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಣೆಪ್ಪ ಹನಮಗೌಡ ಜಿರ್ಲಿ, ಮತ್ತು ನೀರು ಪರಿಕ್ಷಾ ಪ್ರಯೋಗಾಲಯದ ರಸಾಯನಿಕ ತಜ್ಞರಾದ ಮಾರುತಿ ಬಿ ಎನ್ ಹಳ್ಳಿ, ಬಸವರಾಜ ಹೂಗಾರ, ಆದಪ್ಪ ಕಬ್ಬಿಣದ ಆರೋಗ್ಯ ಇಲಾಖೆ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮದ ಹಿರಿಯರು, ನೀರುಗಂಟಿ ಇನ್ನಿತರರು ಪಾಲ್ಗೊಂಡು ಕಾರ್ಯಗತ ಗೊಳಿಸಲಾಯಿತು.

LEAVE A REPLY

Please enter your comment!
Please enter your name here