Doubt whether Gangavati MLAs are against S,CS,T race: :- Magalamani.
ಗಂಗಾವತಿ:-೯.. ಗಂಗಾವತಿಯ ಶಾಸಕರಾದ ಮಾನ್ಯ ಗಾಲಿ ಜನಾರ್ಧನರಡ್ಡಿ ಸಾಹೇಬರು ಎಸ್,ಸಿ ಮತ್ತು ಎಸ್ ಟಿ ಜನಾಂಗದ ವಿರೋಧಿಗಳೇ ಎಂದು ಅನುಮಾನವಾಗುತ್ತಿದೆ ಎಂದು ಕೊಪ್ಪಳ ಜಿಲ್ಲಾ ಸರ್ವಾಂಗೀಣ ಅಭಿವ್ರದ್ದಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಶಂಕೆ ವ್ಯಕ್ತಪಡಿಸಿದ್ದಾರೆ. ಎಸ್ ಸಿ ಮತ್ತು ಎಸ್ ಟಿ ಅನುದಾನವಷ್ಟೆ ಅವರಿಗೆ ಜನರಲ್ ಅನುದಾನವಿಲ್ಲ.ಗಂಗಾವತಿ ನಗರಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೋಟಾದಿಂದ ಆಯ್ಕೆಗೊಂಡಿರುವ ಸದಸ್ಯರಿಗೆ ಸರ್ಕಾರದ ಅನುದಾನ ಮಾತ್ರ ನೀಡಲಾಗುವದು.ಬೇರೆ ಇನ್ನಿತರ ವಾರ್ಡ್ ಗಳಾದ ಜನರಲ್ ವಾರ್ಡ್ ಗಳಿಗೆ ಬೇರೆ ಯಾವುದೇ ಅನುದಾನ ಬಾರದಿರುವ ಕಾರಣ ಆ ಸದಸ್ಯರು ತಮ್ಮ ವಾರ್ಡ್ ಅಭಿವ್ರದ್ದಿಗಾಗಿ ವೆಚ್ಚ ಮಾಡಲು ಅನುದಾನ ಸಾಕಾಗುವುದಿಲ್ಲ. ಕಾರಣ ನಗರದ ಅಭಿವ್ರದ್ದಿಯ ಸಮತೋಲನ ತಪ್ಪುತ್ತದೆ.ಇದನ್ನು ತಪ್ಪಿಸಲು ಈ ರೀತಿ ಕ್ರಮ ಕೈಗೊಳ್ಳುವದು ಅನಿವಾರ್ಯತೆ ಇದೆ. ಎಂದು ಹೇಳಿಕೆ ನೀಡುವ ಬದಲು ಸಮತೋಲನದಿಂದ ಕೆಲಸ ಮಾಡಿದರೆ ಸಾಕಾಗುತ್ತತ್ತು. ಈ ರೀತಿ ಬಯರಂಗವಾಗಿ ಹೇಳಿಕೆ ನೀಡುವದರ ಮೂಲಕ ಈ ಜಾತಿ ಮತ್ತು ಇತರೆ ಜಾತಿಗಳ ಮಧ್ಯ ಭಿನ್ನತೆ ಉಂಟು ಮಾಡುವ ಮಾತು ಸರಿಯಲ್ಲ. ಸ್ವಾತಂತ್ರ್ಯ ಬಂದಾಗಿನಿಂದಲೂ ಯಾವ ಶಾಸಕರು ಈ ರೀತಿ ಹೇಳಿಕೆ ನೀಡದೇ ಜನಪರ ಕಾರ್ಯ ಮಾಡಿದ್ದಾರೆ. ಶಾಸಕರು ಗಣಿಧಣಿಗಳಾಗಿ ಬಳ್ಳಾರಿಯಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆಂದು ಗಂಗಾವತಿಯ ನಮ್ಮ ಜನ ಆಯ್ಕೆ ಮಾಡಿದ್ದಾರೆ. ಅನುದಾನ ಕೊರತೆಯಾದಲ್ಲಿ ಕರುಣಾಮಯಗಳಾದ ಶಾಸಕರು ತಮ್ಮ ಹಣದಿಂದ ಅಭಿವ್ರದ್ದಿ ಮಾಡಲಿ. ಅದು ಬಿಟ್ಟು ಜಾತಿಗಳ ಮಧ್ಯ ವ್ಯಮನಸ್ಸು ಹಬ್ಬುವ ರೀತಿಯಲ್ಲಿ ಮಾತನಾಡಬಾರದು. ಅದೇ ರೀತಿ ಎಸ್‌ಟಿ ಹಾಸ್ಟೇಲ್ ಜಾಗದ ಕುರಿತು ಮಾತನಾಡಿದ್ದಾರೆ. ಇದು ಅವರಿಗೆ ಶೋಭೆಯಲ್ಲ. ಅವರ ಹೇಳಿಕೆ ಹಿಂಪಡೆಯಬೇಕು. ಶಾಸಕರು ನಮ್ಮ ಎಲ್ಲರ ನಾಯಕರು ಎಂಬ ಭಾವನೆ ನಮ್ಮದು. ಇನ್ನು ಮುಂದೆ ಇಂತಹ ಕೀಳು ವಿಚಾರ ಇಟ್ಟುಕೊಳ್ಳಬಾರದೆಂದು ಪತ್ರಿಕಾ ಪ್ರಕಟಣೆ ಮೂಲಕ ಮ್ಯಾಗಳಮನಿ ಆಗ್ರಹಿಸಿದ್ದಾರೆ.