H.D.K. For war, we have the perfect medicine for BJP flight: Jyoti
ಕೊಪ್ಪಳ : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಯುದ್ಧ ಮಾಡಲು ವಿರೋಧ ಪಕ್ಷದಲ್ಲಿ ಇದಿವಿ ಎಂದಿದ್ದಾರೆ, ಇನ್ನು ಬಿಜೆಪಿ ತನ್ನದೇ ಕೇಂದ್ರ ಸರಕಾರದಲ್ಲಿ ಎಲ್ಲವೂ ದುಬಾರಿ ಮಿತಿಮೀರಿದ್ದು ನಾಚಿಕೆ ಮಾನ ಮರ್ಯಾದೆ ಬಿಟ್ಟು ಹೋರಾಟಕ್ಕೆ ಇಳಿದಿರುವದು ವಿಪರ್ಯಾಸ ಆದರೆ ಅದಕ್ಕೆ ನಮ್ಮಲ್ಲಿ ಸೂಕ್ತ ಔಷಧಿ ಇವೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ವಿಪರೀತ ಬೆಲೆ ಏರಿಕೆಯಾಗಿದ್ದು, ಮೋದಿಯ ಅಚ್ಛೇದಿನ್, ಕೋಟಿ ಉದ್ಯೋಗ, ಕಪ್ಪು ಹಣ, ರೈತರ ಏಳ್ಗೆ, ಸ್ಮಾರ್ಟ್ ಸಿಟಿ ಯಾವುದೂ ಆಗಿಲ್ಲ ಎಂದು ಮೋದಿಶಾರನ್ನು ಕೇಳುವ ಬದಲು ರಾಜ್ಯದಲ್ಲಿ ಹೀನಾಯವಾಗಿ ಸೋತ ಸಂಕಟಕ್ಕೆ ಬೀದಿಗೆ ಇಳಿದಿದ್ದಾರೆ, ಅವರ ಈ ಹೋರಾಟಕ್ಕೆ ಹಾರಾಟಕ್ಕೆ ಚೀರಾಟಕ್ಕೆ ಜನ ಮತ್ತೆ ಮತ್ತೆ ಉತ್ತರ ಕೊಡಲಿದ್ದಾರೆ, ಬರುವ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಮುಂದಿನ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ೩೪ ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವದರ ಜೊತೆಗೆ ಏಳೂ ತಾಲ್ಲೂಕು ಪಂಚಾಯತಿಯಲ್ಲಿ ಅಧಿಕಾರಕ್ಕೆ ಬರುತ್ತದೆ ಅದಕ್ಕಾಗಿ ಬೂತ್ ಮಟ್ಟದಲ್ಲಿ ಕೆಲಸ ಆರಂಭವಾಗುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗ್ಯಾರಂಟಿ ಬಗ್ಗೆ ಕಾಂಗ್ರೆಸ್ ಗೆ ಸ್ಪಷ್ಟತೆ ಇದೆ, ಆದರೆ ಬಿಜೆಪಿ ಮತ್ತು ಜೆಡಿಎಸ್ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಆದರೆ ಜನರಿಗೆ ಯಾರು ನಂಬಿಕಸ್ಥರು ಯಾರು ಮೋಸಗಾರರು ಎಂಬ ಅರಿವು ಈಗ ಬಂದಿದೆ, ಬಿಜೆಪಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ದುರಾಲೋಚನೆಯಲ್ಲಿದ್ದರೆ, ಬಿಜೆಪಿ ಜೊತೆಗೆ ಸೇರಲು ಸ್ವತಃ ಸೆಕ್ಯುಲರ್ ಮಾಜಿ ಪ್ರಧಾನಿ ದೇವೇಗೌಡರೇ ಮುಂದೆ ಬಂದಿರುವದು ಆ ಪಕ್ಷದ ಶೋಚನೀಯ, ಕರುಣಾಜನಕ ಸ್ಥಿತಿಯಾಗಿದೆ ಎಂದವರು ಕುಹುಕವಾಡಿದ್ದಾರೆ.
ನಾನು ಈ ಹೇಳಿಕೆ ನೀಡಲು ಸಣ್ಣವಳಾದರೂ ಸಹ ಈ ಎರಡೂ ಪಕ್ಷಗಳ ಮುಖಂಡರ ವಿವೇಕರಹಿತ ಹೇಳಿಕೆ, ಯೋಚನಾರಹಿತ ಮಾತುಗಳು ಮತ್ತು ಸುಖಾಸುಮ್ಮನೆ ಮಾಡುತ್ತಿರುವ ವಿರೋಧವನ್ನು ಕಂಡು ಸುಮ್ಮನೆ ಕೂಡಲು ಸಾಧ್ಯವಾಗುತ್ತಿಲ್ಲ, ಕಾಂಗ್ರೆಸ್ ಬಡವರ ಪಕ್ಷ, ಬಡವರು ಮೊದಲು ಮೂರು ಹೊತ್ತು ಉಂಡು ಆರಾಮವಾಗಿರಬೇಕು ನಂತರ ಉಚಿತ ವಿದ್ಯುತ್ ಅನುಕೂಲದ ಮೂಲಕ ಓದಿ ದೇಶದ ಆಸ್ತಿಯಾಗಬೇಕು, ಓದಿಯೂ ಉದ್ಯೋಗವಿಲ್ಲದೇ ಕಂಗೆಟ್ಟ ಯುವಜನರಿಗೆ ಔದ್ಯೋಗಿಕ ಸಹಾಯಕ್ಕಾಗಿ ಎರಡು ವರ್ಷ ಸ್ಕಾಲರ್ ಶಿಪ್ ನೀಡುತ್ತಿದೆ. ಇನ್ಮು ಮಹಿಳೆಯರಿಗೆ ಉಚಿತ ಬಸ್ ಜೊತೆಗೆ ಕೇಂದ್ರ ಸರಕಾರದ ಬೆಲೆ ಏರಿಕೆ ಹೊರೆ ಇಳಿಸಲು ಪ್ರತಿ ಕುಟುಂಬಕ್ಕೆ ೨೦೦೦ ರೂ. ಸಹಾಯ ಧನ ನೀಡುವ ಮೂಲಕ ಬಡವರ ಕಲ್ಯಾಣ ಗ್ಯಾರಂಟಿ ಎಂದು ಕಾಂಗ್ರೆಸ್ ಹೇಳುತ್ತದೆ ಎಂದು ಜ್ಯೋತಿ ಎಂ. ಗೊಂಡಬಾಳ ಹೇಳಿಕೆ ಮೂಲಕ ತಿಳಿ ಹೇಳಿದ್ದಾರೆ.
ಉಚಿತ ಸ್ಕೀಂಗಳ ಅರ್ಜಿ ಉಚಿತ ಭರ್ತಿ : ಇನ್ನು ರಾಜ್ಯ ಸರಕಾರ ಘೋಷಣೆ ಮಾಡಿರುವ ಉಚಿತ ಯೋಜನೆಗಳನ್ನು ಪಡೆಯಲು ಬೇಕಿರುವ ಕಾರ್ಡುಗಳನ್ನು ಪಡೆಯಲು ಅರ್ಜಿ ಕರೆದಿದ್ದಾರೆ, ಕೊಪ್ಪಳದಲ್ಲಿ ಆ ಅರ್ಜಿಗಳನ್ನು ಸಹ ಉಚಿತವಾಗಿ ಭರ್ತಿ ಮಾಡಿಕೊಡಲು ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಎರಡು ದಿನದಲ್ಲಿ ಕೌಂಟರ್ ತೆರೆಯಲಿದೆ, ಅಲ್ಲಿ ಅರ್ಜಿ ಪಡೆದು ಪ್ರತಿ ಕುಟುಂಬಕ್ಕೆ ಸಿಗಬೇಕಾದ ಎಲ್ಲಾ ಸೌಲತ್ತುಗಳನ್ನು ಉಚಿತವಾಗಿ ಕೊಡಿಸುತ್ತೇವೆ, ಯಾರೂ ಆತಂಕಪಟ್ಟು ಹಣ ಕಳೆದುಕೊಳ್ಳಬಾರದು, ರಾಜ್ಯದಲ್ಲಿ ಬಡವರ ಕಲ್ಯಾಣವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.