Minority unit of Congress insists to make Iqbal Ansari as MLC
ಗಂಗಾವತಿ 8 ಮಾಜಿ ಸಚಿವ ಅಭಿವೃದ್ಧಿಯ ಹರಿಕಾರರಾಗಿದ್ದ ಇಕ್ಬಾಲ್ ಅನ್ಸಾರಿ ಅವರ ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳಬೇಕೆಂದು ಕಾಂಗ್ರೆಸ್ ಪಕ್ಷದ ಕೊಪ್ಪಳ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಅಜ್ವರ ಅಲಿ ಎನ್ ಎಸ್ ಯು ಐ ತಾಲೂಕ ಅಧ್ಯಕ್ಷ ಆಯೋ ಬ ಅಲ್ಪಸಂಖ್ಯಾತರ ರಾಜ್ಯಕಾರಣಿಯ ಸದಸ್ಯ ಹನೀಫ್ ವಿಶ್ವನಾಥ್ ಪಾಟೀಲ್ ಇತರರು ಒತ್ತಾಯಿಸಿದ್ದಾರೆ ಈ ಕುರಿತು ಮಾತನಾಡಿ ಕಲ್ಯಾಣ ಕರ್ನಾಟಕದಲ್ಲಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಅವರು ಅಭಿವೃದ್ಧಿಯ ಹರಿಕಾರ ಅಲ್ಪಸಂಖ್ಯಾತರ ಪ್ರಮುಖ ನಾಯಕ ರೆಂದು ಕಾಂಗ್ರೆಸ್ ಪಕ್ಷ ಗುರುತಿಸಿದೆ ಕೆಲವು ಪಟ್ಟ ಭದ್ರ. ಶಕ್ತಿಗಳಿಂದ ಸೋಲು ಅನುಭವಿಸಿದ ಇಕ್ಬಾಲ್ ಅನ್ಸಾರಿ ಅವರು ಸರ್ವಧರ್ಮವನ್ನು ಹಾಗೂ ಸಮಾಜದ ಎಲ್ಲಾ ವರ್ಗದವರನ್ನು ಪ್ರೀತಿ ಪಾತ್ರರಾಗಿದ್ದಾರೆ .
ಈ ಹಿನ್ನೆಲೆಯಲ್ಲಿ 59 ಸಾವಿರ ಅಧಿಕ ಮತಗಳನ್ನು ಪಡೆದು ಚುನಾವಣೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯ ಡಿಕೆ ಶಿವಕುಮಾರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರು ಅನ್ಸಾರಿ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿ ಸೋದರ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಅನ್ನು ಭದ್ರಕೋಟೆಯನ್ನಾಗಿಸುವಲ್ಲಿ ಪಕ್ಷ ಗುರುತಿಸಿ ಎಂಎಲ್‌ಸಿಎನ್ನಾಗಿಸಬೇಕೆಂದು ಒತ್ತಾಯಿಸಿದರು