AIDSO delegation met the Chief Minister on the educational issues of the state
ಬೆಂಗಳೂರು: ರಾಜ್ಯದ ಶೈಕ್ಷಣಿಕ ಸಮಸ್ಯೆಗಳು ಹಾಗೂ ಸವಾಲುಗಳ ಕುರಿತು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ. ಸಿದ್ಧರಾಮಯ್ಯ ಅವರನ್ನು ಎಐಡಿಎಸ್‌ಒ ರಾಜ್ಯ ನಿಯೋಗವು ನೆನ್ನೆಯ ದಿನ ಭೇಟಿ ಮಾಡಿತು. ವಿಲೀನದ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವುದು, ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ವ ಹಣಕಾಸು ನಿರ್ವಹಣಾ ಸಂಸ್ಥೆಗಳಾಗಿ ಮಾರ್ಪಾಡುಗೊಳಿಸಿ ಆ ಮೂಲಕ ದುಬಾರಿ ಶುಲ್ಕ ವಿಧಿಸುವುದು ಮುಂತಾದ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು ಮತ್ತು ಪ್ರಮುಖವಾಗಿ ಪಠ್ಯ ಪುಸ್ತಕಗಳಲ್ಲಿ ಪ್ರಜಾತಾಂತ್ರಿಕ, ಧರ್ಮನಿರಪೇಕ್ಷ ಆಶಯಗಳನ್ನು ಕಾಪಾಡಬೇಕು ಎಂಬ ಮನವಿ ಮಾಡಲಾಯಿತು.
ಇದರೊಂದಿಗೆ, ಹಾಸ್ಟೆಲ್ ಸಮಸ್ಯೆಗಳು, ವಿದ್ಯಾರ್ಥಿವೇತನ ವಿಳಂಬ, ಶುಲ್ಕ ಏರಿಕೆ, ಎನ್.ಇ.ಪಿ.- 20 ಇಂದ ಉಂಟಾಗಿರುವ ಗೊಂದಲಗಳು, ಇತರ ಶೈಕ್ಷಣಿಕ ಸವಾಲುಗಳ ಕುರಿತು ಚರ್ಚಿಸಿ ಅಭಿಪ್ರಾಯಗಳನ್ನು ಅವರ ಮುಂದೆ ಮಂಡಿಸಲಾಯಿತು.
ರಾಜ್ಯ ಸರ್ಜರವು ಉನ್ನತ ಶಿಕ್ಷಣ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸುತ್ತದೆ ಎಂದು ರಾಜ್ಯದ ವಿದ್ಯಾರ್ಥಿಗಳು ಭರವಸೆ ಇಟ್ಟಿದ್ದೇವೆ.
ಎಐಡಿಎಸ್‌ಒ ರಾಜ್ಯ ಖಜಾಂಚಿ ಅಭಯಾ ದಿವಾಕರ್ ಹಾಗೂ ರಾಜ್ಯ ಸೆಕ್ರೆಟರಿಯಟ್ ಸದಸ್ಯರಾದ ಅಪೂರ್ವ ನಿಯೋಗವನ್ನು ಪ್ರತಿನಿಧಿಸಿದ್ದರು.