Home ಪ್ರಖರ ವಿಶೇಷ ಮಡಿಕೇರಿ ಕ್ಷೇತ್ರದ ಶಾಸಕರಿಗೆ ಹಾಗೂ ಕೊಡಗು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಅವರಿಗೆ...

ಮಡಿಕೇರಿ ಕ್ಷೇತ್ರದ ಶಾಸಕರಿಗೆ ಹಾಗೂ ಕೊಡಗು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ

0
An appeal from the Karnataka Defense Forum to the MLAs of Madikeri Constituency and to the District Commissioners of Kodagu and the Zilla Panchayat Working Officer.

ಜಿಲ್ಲಾ ಪಂಚಾಯಿತಿಯಿಂದ ಚುನಾವಣೆ ಒಂದು ತಿಂಗಳು ಮೊದಲು ನಡೆದ ಡಾಮಡೀಕರಣ ಕಳಪೆ ಕರವೇ ಆರೋಪ ಡಾಮರೀಕರಣ ಕಳಪೆ ಮಾಡಿದಂತಹ ಗುತ್ತಿಗೆದಾರರನ್ನು ಕಪ್ಪು ಸೇರಿಸಬೇಕು ಹಾಗೂ ಈ ರಸ್ತೆಗಳು ಸರಿ ಇದೆ ಎಂದು ಬಿಲ್ಲು ಮಾಡಲು ಒಪ್ಪಿಗೆ ಸೂಚಿಸಿದ ಕೆಲಸದಿಂದ ವಜಾ ಮಾಡಬೇಕೆಂದು ಕರವೇ ಕಾರ್ಯಕರ್ತರಿಂದ ಮನವಿ ಪತ್ರಿಕಾ ಹೇಳಿಕೆ ಮುಖಾಂತರ ಮನವಿ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ನಲ್ಲಿ ಜಿಲ್ಲಾ ಪಂಚಾಯಿತಿಯಿಂದ ಚುನಾವಣೆಗೆ ಮೊದಲು ಹಲವು ರಸ್ತೆಗಳನ್ನು ಡಾಮರೀಕರಣ ಮಾಡಿರುತ್ತಾರೆ. ಇದರಲ್ಲಿ ಭಾಗಶಹ ಕಳಪೆ ಕಾಮಗಾರಿಯಿಂದ ಕೂಡಿರುತ್ತದೆ ಇದಕ್ಕೆ ಸಾಕ್ಷಿ ಎಂಬುವಂತೆ ಗೌಡಳ್ಳಿ ಗ್ರಾಮದ ಪುಲಗಿರಿ ದೇವಸ್ಥಾನದ ರಸ್ತೆ 2.50 ಲಕ್ಷ ರಸ್ತೆ ಆಗಿರುತ್ತದೆ ಇದು ಸಂಪೂರ್ಣವಾಗಿ ಹುಲ್ಲಿನಿಂದ ಕೂಡಿದ್ದು ಡಾಮರೀಕರಣ ಕೆಳಭಾಗದಿಂದ ಹುಲ್ಲು ಬರುತಿದ್ದು ಡಾಂಬರೀಕರಣ ಎಲ್ಲವೂ ಕಿತ್ತು ಹೋಗುತ್ತಿದೆ. ಇಂಜಿನಿಯರ್ ಮತ್ತು ಗುತ್ತಿಗೆದಾರ ಸೇರಿ ಎಂಥಾ ಹೈಟೆಕ್ ರಸ್ತೆ ಮಾಡಿ ಜನರ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ ಹಾಗೂ ಹೆಗಳ ಗ್ರಾಮದಲ್ಲಿ ಸ್ಮಶಾನ ಕೆ ಹೋಗುವ ದಾರಿಯಲ್ಲಿ 2.50 ಲಕ್ಷದ ಡಾಮರೀಕರಣ ಆಗಿರುತ್ತದೆ ಈ ರಸ್ತೆ ಮಾಡಿ ಒಂದು ತಿಂಗಳಿನಲ್ಲೇ ಈ ರಸ್ತೆ ಗುಂಡಿ ಬಿದ್ದು ಅಲ್ಲಲ್ಲಿ ಬೃಹಧಾಕರದ ಗುಂಡಿಗಳು ಬಿದ್ದಿರುತ್ತದೆ ಹಾಗೂ ಈ ರಸ್ತೆ ಸಂಪೂರ್ಣವಾಗಿ ಕಿತ್ತು ಹೋಗಿರುತ್ತದೆ ಹಾಗೂ ಬಸವನಕೊಪ್ಪ ಗ್ರಾಮದ ಗದ್ದೆಗೆ ಹೋಗುವ ರಸ್ತೆಯು 2.50 ಲಕ್ಷದಲ್ಲಿ ಡಾಮರೀಕರಣಗೊಂಡಿರುತ್ತದೆ ಕಳಪೆಂದು ಕೂಡಿದ್ದು ರಸ್ತೆಯ ಭಾಗದಲ್ಲಿ ಹುಲ್ಲು ಹುಟ್ಟುತ್ತ ಇದೆ ರಸ್ತೆಯ ಡಾಮರೀಕರಣ

ಅಡಿಯಿಂದ ಹುಲ್ಲು ಬಂದಿರೋದು ಕಂಡು ಬಂದಿರುತ್ತದೆ ಹಾಗಾಗಿ ಈ ಯಾವುದೇ ರಸ್ತೆಗಳಿಗೆ ಚುನಾವಣಾ ಮೊದಲು ಮಾಡಿದಂತಹ ರಸ್ತೆಗಳಿಗೆ ಯಾವುದೇ ಹಣ ಬಿಡುಗಡೆ ಮಾಡದೆ ಈಗ ಮಾಡಿರುವ ಡಾಮರಿಕರಣ ಸಂಪೂರ್ಣ ತೆಗೆದು ಉತ್ತಮವಾಗಿ ಮರು ಡಾಮರೀಕರಣ ಮಾಡಿಕೊಡಬೇಕು ಹಾಗೂ ಈ ಎಲ್ಲಾ ರಸ್ತೆ ಕಳಪಕಾಮಗರಿ ಮಾಡಿದಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಹಾಗೂ ಈ ಡಾಂಬರೀಕರಣ ಮಾಡುವಾಗ ಇಂಜಿನಿಯರ್ ಸರಿಯಾಗಿ ನೋಡದೆ ಬಿಲ್ ಮಾಡಲು ಒಪ್ಪಿಗೆ ಸೂಚಿಸುತ್ತಾರೆ ಇಂಥ ಅಧಿಕಾರಿಗಳನ್ನು ಅಮಾನತುಪಡಿಸಿ ಇವರಿಗೆ ಸರಿಯಾದ ಶಿಕ್ಷೆ ಆಗಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ ಈಗಾಗಲೇ ನಾವು ಮಾಹಿತಿ ಹಕ್ಕು ಮುಖಾಂತರ ಮಾಹಿತಿ ಕೇಳಿರುತ್ತೇವೆ ಕೊಡಗು ಜಿಲ್ಲಾ ಪಂಚಾಯತಿಯಿಂದ ಅದು ಬಂದ ತಕ್ಷಣ ಮಾನ್ಯ ಲೋಕಾಯುಕ್ತರಿಗೆ ಈ ರಸ್ತೆಗಳ ಬಗ್ಗೆ ದೂರು ನೀಡಲಾಗುವುದು ಹಾಗೂ ಮಾನ್ಯ ಶಾಸಕರಿಗೂ ಈ ರಸ್ತೆಯ ಬಗ್ಗೆ ಮನವಿ ಸಲ್ಲಿಸಲಾಗುವುದು ಹಾಗೂ ಶಾಸಕರು ಈ ರಸ್ತೆಗಳನ್ನು ಪರಿಶೀಲಿಸಿ ಇನ್ನು ಮುಂದೆ ಈ ಕಳಪೆಯಾಗಿರುವಂತ ರಸ್ತೆಗಳಿಗೆ ಹಣ ಬಿಡುಗಡೆ ಮಾಡಿದಂತೆ ಅಧಿಕಾರಿಗಳಿಗೆ ಸೂಚಿಸುವಂತೆ ಶಾಸಕರಿಗೆ ಕರವೇ ಮನವಿ ಮಾಡುತ್ತಿದ್ದೇವೆ ಹಾಗೂ ಇಂಜಿನಿಯರ್ ಗಳಿಗೆ ಸರಿಯಾದ ಶಿಕ್ಷೆ ಆಗಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಮನವಿ ಮಾಡಿಕೊಳ್ಳುತ್ತಿದ್ದೇವೆ
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸೋಮವಾರಪೇಟೆ ತಾಲೂಕು ಅಧ್ಯಕ್ಷರಾದ ಕರವೇ ಫ್ರಾನ್ಸಿಸ್ ಡಿಸೋಜಾ ಹಾಗೂ ಗೌಡಳ್ಳಿ
ನವದುರ್ಗಾಪರಮೇಶ್ವರಿ ದೇವಾಲಯದ ಸಮುದಾಯ ಭವನದ ಅಧ್ಯಕ್ಷರಾದ ಮಹೇಶ್ ರವರು ಹಾಗೂ ರಾಮನಹಳ್ಳಿ ಕರವೇ ಉಪಾಧ್ಯಕ್ಷರಾದ ರಕ್ಷಿತ್ ರವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here