Home ಪ್ರಖರ ವಿಶೇಷ ಅವ್ಯಾಚ ಶಭ್ದಗಳಿಂದ ರೈತರ ನಿಂಧನೆ ಅರಣ್ಯ ಅಧಿಕಾರಿಗಳಿಗೆ ದೂರು.

ಅವ್ಯಾಚ ಶಭ್ದಗಳಿಂದ ರೈತರ ನಿಂಧನೆ ಅರಣ್ಯ ಅಧಿಕಾರಿಗಳಿಗೆ ದೂರು.

0
Complaint to the Forest Officers about farmers' harassment due to unintelligible noises.


ವರದಿ :ಬಂಗಾರಪ್ಪ ಸಿ

ಹನೂರು :ಕಳೆದ ಮೂರು ತಿಂಗಳಿಂದ ಕಾಡಿಗೆ ಗೋವುಗಳನ್ನು ಮೇಯಿಸಲು ರೈತರು ತೆರಳಿದರೆ ಕಿರುಕುಳ ನೀಡುತ್ತಿದ್ದಾರೆ ಎಂದು ರೈತ ಸಂಘದ ಅಧ್ಯಕ್ಷರಾದ ಹರೀಶ್ ಆರೋಪಿಸಿದ್ದಾರೆ.
ಹನೂರು ಪಟ್ಟಣದ ವಲಯ ಅರಣ್ಯ ಅಧಿಕಾರಿಗಳ ಕಛೇರಿಗೆ ರೈತ ಮುಖಂಡರೊಂದಿಗೆ ಆಗಮಿಸಿದ ಅವರು ಈಗಾಗಲೆ ನಮ್ಮ ರೈತರು ಪೂರ್ವಜರ ಕಾಲದಿಂದಲು ಗೋವುಗಳನ್ನು ರಕ್ಷಣೆ ಮಾಡುತ್ತಿದ್ದು ಅದರ ಅಂಗವಾಗಿ ಕಾಡಿಗೆ ತೆರಳಿದರೆ ಅರಣ್ಯ ಇಲಾಖೆಯ ಅಧಿಕಾರಿಗಳು ರೈತರ ಮೇಲೆ ಮನಬಂದಂತೆ ಮಾತನಾಡಿ ನಮ್ಮ ರೈತರಿಗೆ ಕಿರುಕುಳ ನೀಡುತಿದ್ದಾರೆ ಇದರಿಂದ ಸಾಕಷ್ಟು ತೊಂದರೆ ಯಾಗುತ್ತದೆ ಇನ್ನು ಮುಂದಾದರು ರೈತರಿಗೆ ತೊಂದರೆ ಕೊಡುವುದನ್ನು ನಿಲ್ಲಿಸಬೇಕು ಇಲ್ಲದಿದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಮನವಿ ಕೊಡುವ ಮೂಲಕ ತಿಳಿಸಿದರು . ಇದೇ ಸಮಯದಲ್ಲಿ
ಅರಣ್ಯ ಇಲಾಖೆ ಅಧಿಕಾರಿಗಳು. ಭಾರತಿಯ ಕಿಸನ್ ಸಂಘದ ತಾಲೂಕು ಸಮಿತಿ ಸದಸ್ಯರು ಸೇರಿದಂತೆ ಇತರರು ಹಾಜರಿದ್ದರು.

LEAVE A REPLY

Please enter your comment!
Please enter your name here