Home ಪ್ರಖರ ವಿಶೇಷ ಚಕ್ರ ಸವೆದರು ಚಾಲನೆಗೆ ಕುಮ್ಮಕ್ಕು ಮುಜುರಾಯಿ ಇಲಾಖೆ ವಿರುದ್ಧ ಭಕ್ತ ಪ್ರಯಾಣಿಕರ ಆಕ್ರೋಶ.

ಚಕ್ರ ಸವೆದರು ಚಾಲನೆಗೆ ಕುಮ್ಮಕ್ಕು ಮುಜುರಾಯಿ ಇಲಾಖೆ ವಿರುದ್ಧ ಭಕ್ತ ಪ್ರಯಾಣಿಕರ ಆಕ್ರೋಶ.

0
Devotee commuters are outraged against Mujurai Department for abetting wheel worn driving.


ವರದಿ:ಬಂಗಾರಪ್ಪ ಸಿ ಹನೂರು .


ಹನೂರು : ಜಿಲ್ಲೆಯ ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೈ ಮಹದೇಶ್ವರ ಪ್ರಾಧಿಕಾರಕ್ಕೆ ಸೇರಿರುವ ಬಸ್ಸುಗಳಲ್ಲಿ ಬಳಕೆಗೆ ಯೋಗ್ಯವಲ್ಲದ ಚಕ್ರಗಳನ್ನು ಅಳವಡಿಸಿ ಚಾಲನೆ ಮಾಡುತ್ತಿರುವ ಮುಜುರಾಯಿ ಇಲಾಖೆ ವಿರುದ್ಧ ರೈತ ಮುಖಂಡರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಳ್ಳೇಗಾಲ ಖಾಸಗಿ ಬಸ್ ನಿಲ್ದಾಣದಲ್ಲಿ ಬೆಂಗಳೂರಿಗೆ ತೆರಳಲು ನಿಂತಿದ್ದ ಬಸ್ಸೊಂದರಲ್ಲಿ ಸವೆದ ಚಕ್ರವನ್ನು ಹಾಕಿ ಓಡಿಸುತ್ತಿದ್ದಾರೆ,ಇಂತಹ ವಾಹನದಿಂದ ಏನಾದರೂ ಅಪಾಯ ಅಪಘಾತವಾದರೆ ಯಾರು ಹೊಣೆ, ಮಲೈ ಮಹದೇಶ್ವರ ಸನ್ನಿದಿಯಲ್ಲಿ ತಿಂಗಳಿಗೆ ಕೋಟ್ಯಾಂತರ ರೂಪಾಯಿ ದೇಣಿಗೆ ಕಾಣಿಕೆ ಸಂಗ್ರಹವಾಗುತ್ತಿದ್ದರು. ಉತ್ತಮ ಗುಣಮಟ್ಟದ ಚಕ್ರವನ್ನು ಅಳವಡಿಸಲು ತಮಗೆ ಸಾಧ್ಯವಿಲ್ಲವೇ ದೇವಸ್ಥಾನದ ಆಡಳಿತ ಅಧಿಕಾರಿಗೆ ಜವಾಬ್ದಾರಿಯೆ ಇಲ್ಲವೇ ಇಂತಹ ಬಸ್ಸಿನಲ್ಲಿ ಪ್ರಯಾಣ ಮಾಡುವ ಚಾಲಕರು ಮತ್ತು ಸಾರ್ವಜನಿಕರಿಗೆ ಮತ್ತು ಅವರ ಕುಟುಂಬಕ್ಕೆ ಏನಾದರೂ ಅಪಾಯವಾದರೆ ಯಾರು ಹೊಣೆ ಈಗ ಅಪಘಾತಗಳಾಗಿ ಸಾವು ನೋವುಗಳ ಸಂಖ್ಯೆ ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಅಕ್ರೋಶ ವ್ಯಕ್ತಪಡಿಸಿದರು ರೈತ ಮುಖಂಡರು ಆಕ್ರೋಶವ್ಯಕ್ತಪಡಿಸಿದರು.ಈ ಕೂಡಲೇ ಸೂಕ್ತವಾದ ಟೈರ್ ಗಳನ್ನು ಅಳವಡಿಸಿ ಬಸ್ ಚಾಲನೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ಸರ್ವೋದಯ ಕರ್ನಾಟಕ ಪಕ್ಷದ ಕೊಳ್ಳೇಗಾಲ ತಾಲೂಕು ರೈತ ಸಂಘದ ಮುಖಂಡರಾದ ಮಾದೇವ ಪಿ,ಕುಮಾರ್, ವಾಸು,ಮಲ್ಲೇಶ,ಸೂರಾಪುರ ಕುಮಾರ್, ಬಸವರಾಜು ಸೇರಿದಂತೆ ಇತರರು ಅಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here