Set up Indira Canteen in Khanapur, repair dilapidated roads: Journalist and activist Basavaraju appeals to MLA Vithal Halagekar
ಖಾನಾಪುರ: ಹೌದು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಖಾನಾಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿದ್ದ ವಿಠಲ್ ಹಲಗೇಕರ್ ಅವರು ಜಯಗಳಿಸಿ ಶಾಸಕರಾಗಿ ಆಯ್ಕೆಯಾದ ಮೇಲೆ ಮೊದಲಬಾರಿಗೆ ಇಂದು ಖಾನಾಪುರದ ಶಾಂತಿನಿಕೇತನ ಶಾಲೆಯಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ಭೇಟಿಯಾಗಿ ಅವರಿಗೆ ಶುಭ ಕೋರಿ ಖಾನಾಪುರ ಕ್ಷೇತ್ರದ ವ್ಯಾಪ್ತಿಯ ಕಾರ್ಮಿಕರು, ರೈತಾಪಿ ವರ್ಗದವರು, ಬಡ ಕೂಲಿ ಕಾರ್ಮಿಕರ ಹಿತದೃಷ್ಟಿಯಿಂದ, ದಿನ ನಿತ್ಯ ದುಡಿಯಲು ಖಾನಾಪುರ ಪಟ್ಟಣಕ್ಕೆ ಹೆಚ್ಚು ಜನ ಬರುತ್ತಿದ್ದು, ಇವರೆಲ್ಲರ ಹಿತದೃಷ್ಟಿಯಿಂದ ಖಾನಾಪುರ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಸ್ತಾಪನೆ ಮಾಡಿ ಅನುಕೂಲ ಮಾಡಿಕೊಡಬೇಕು ಹಾಗೂ ಖಾನಾಪುರ ಕ್ಷೇತ್ರದಲ್ಲಿ ರಸ್ತೆಗಳು ಹದಗೆಟ್ಟಿವೆ. ಆದ್ದರಿಂದ ಅವುಗಳನ್ನು ದುರಸ್ತಿ ಪಡಿಸಿ ಬಸ್ ವ್ಯವ್ಯಸ್ಥೆ ಕಲ್ಪಿಸಬೇಕು ಹಾಗೂ ಇನ್ನೂ ಮುಂತಾದ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು. *