Facilitate people by increasing the number of buses*
ಗಂಗಾವತಿ: ಶರಣಪ್ಪ ಸಜ್ಜೀಹೊಲ ಆಮ್ ಆದ್ಮಿ ಪಾರ್ಟಿ, ಜಂಟಿ ಕಾರ್ಯದರ್ಶಿ. ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ ರಚನೆಯಾಗಿರುವ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳು ಇದೀಗ ತಾನೇ 5 ಗ್ಯಾರಂಟಿ ಯೋಜನೆಗಳ ಸಂಬಂಧಪಟ್ಟಂತೆ ಘೋಷಣೆ ಮಾಡಿದ್ದು ಸ್ವಾಗತ. ಸದರಿ ಘೋಷಣೆಗ ಅನುಗುಣವಾಗಿ ಗ್ಯಾರಂಟಿ ಯೋಜನೆಗಳ ಲಾಭ ಕರ್ನಾಟಕದ ಜನತೆಗೆ ದೊರೆಯಬೇಕಾದರೆ ಕರ್ನಾಟಕ ಸರಕಾರವು ವ್ಯವಸ್ಥೆಯನ್ನು ಸರಿಪಡಿಸಬೇಕಾಗುತ್ತದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಗ್ಯಾರಂಟಿ ಯೋಜನೆಯನ್ನು ಘೋಷಣೆ ಮಾಡಿರುವ ಸರ್ಕಾರ ಕೂಡಲೇ ಬಸ್ಸುಗಳ ಸಂಖ್ಯೆಯನ್ನು ಜಾಸ್ತಿ ಮಾಡುವ ಮೂಲಕ ಕರ್ನಾಟಕದ ಎಲ್ಲ ಮಹಿಳೆಯರಿಗೆ ಸದರಿ ಯೋಜನೆಯ ಲಾಭ ದೊರೆಯುವಂತೆ ಮಾಡಬೇಕಾದದ್ದು ತುರ್ತಾಗಿ ಆಗಬೇಕಾದ ಕೆಲಸವಾಗಿದೆ. ಇಲ್ಲದೆ ಹೋದಲ್ಲಿ ಮಹಿಳೆಯರು ಸದರಿ ಉಚಿತ ಬಸ್ ಪ್ರಯಾಣ ಯೋಜನೆಯ ಲಾಭ ಪಡೆದುಕೊಳ್ಳಲು ಇರುವ ಅತಿ ಕಡಿಮೆ ಬಸ್ಸುಗಳಿಗೆ ಪ್ರಯಾಣಿಸಲು ಪ್ರಯತ್ನಿಸಿ ಹೊಡೆದಾಡಿಕೊಂಡು ಸದರಿ ಯೋಜನೆಯಿಂದ ಅನಾಹುತ ಅನುಭವಿಸಬೇಕಾಗುತ್ತದೆ. ಈ ರೀತಿಯ ಅನಾಹುತಗಳನ್ನು ತಪ್ಪಿಸಲು ಕರ್ನಾಟಕ ಸರ್ಕಾರ ಈ ಕೂಡಲೇ ಮುನ್ನೆಚ್ಚರಿಕೆ ಕ್ರಮವಾಗಿ ಕರ್ನಾಟಕದ ಪ್ರಯಾಣಿಕರ ಸಂಖ್ಯೆಗನುಗುಣವಾಗಿ ಬಸ್ಸುಗಳ ಸಂಖ್ಯೆಯನ್ನು ಜಾಸ್ತಿ ಮಾಡಬೇಕಾದ ಕೆಲಸವನ್ನು ಈ ಕೂಡಲೇ ಮಾಡಬೇಕು ಇಲ್ಲದೆ ಹೋದಲ್ಲಿ ಆಮ್ ಆದ್ಮಿ ಪಕ್ಷವು ಕರ್ನಾಟಕ ಸರ್ಕಾರದ ವಿರುದ್ಧ ಅನಿವಾರ್ಯವಾಗಿ ಹೋರಾಟ ಮಾಡಬೇಕಾಗುತ್ತದೆ.