Home ಪ್ರಖರ ವಿಶೇಷ ಹೈದರಾಬಾದನಲ್ಲಿ ಜೂನ್ 4 ರಂದು ಲಿಂಗಾಯತ ಮಹರ‍್ಯಾಲಿ – ಸಿಖ್, ಜೈನ್, ಬೌದ್ಧ ಧರ್ಮಗಳಂತೆ ಲಿಂಗಾಯತವು...

ಹೈದರಾಬಾದನಲ್ಲಿ ಜೂನ್ 4 ರಂದು ಲಿಂಗಾಯತ ಮಹರ‍್ಯಾಲಿ – ಸಿಖ್, ಜೈನ್, ಬೌದ್ಧ ಧರ್ಮಗಳಂತೆ ಲಿಂಗಾಯತವು ಸ್ವತಂತ್ರ ಧರ್ಮಆರು ರಾಜ್ಯಗಳ ಐದು ಲಕ್ಷ ಜನ ಭಾಗವಹಿಸುವ ನಿರೀಕ್ಷೆ – ಚನ್ನಬಸವಾನಂದ ಶ್ರೀಗಳು

0
Lingayat Maharyali on June 4 in Hyderabad - Like Sikh, Jain, Buddhist religions, Lingayat is an independent religion.
Five lakh people from six states are expected to participate - Mr. Channabasavananda

ಬೀದರ: ಜೂನ್ 4 ರಂದು ಭಾನುವಾರ ಹೈದರಾಬಾದಿನ ನಾಂಪಲ್ಲಿಯಲ್ಲಿರುವ ಎಕ್ಸಿಬಿಷನ್ ಮೈದಾನದಲ್ಲಿ ನಡೆಯಲಿರುವ ಲಿಂಗಾಯತ ಧರ್ಮದ ಮಹಾರ್ಯಾಲಿಯ ಪ್ರಚಾರಕ್ಕಾಗಿ ಬಸವಕಲ್ಯಾಣದ 108 ಅಡಿ ಬಸವ ಪುತ್ಥಳಿಯ ಧ್ಯಾನ ಮಂಟಪದಿAದ ಬಸವಜ್ಯೋತಿ ಹೊತ್ತಿಸಿಕೊಂಡು ಬರಲಾಗಿದೆ. ಎರಡು ದಿವಸಗಳ ಕಾಲ ಜಿಲ್ಲೆಯಾದ್ಯಂತ ಸಂಚರಿಸಿ ನಾಳೆ ತೆಲಂಗಾಣದಲ್ಲಿ ಪ್ರಚಾರ ಮಾಡಲಾಗುವುದು. ಇದೇ ಜ್ಯೋತಿಯಿಂದ ಲಿಂಗಾಯತ ಮಹಾರ್ಯಾಲಿ ಉದ್ಘಾಟನೆ ಮಾಡಲಾಗುವುದು ಎಂದು ಜ್ಯೋತಿಯಾತ್ರೆಯ ನೇತೃತ್ವ ವಹಿಸಿರುವ ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.
ಅವರು ನಗರದ ಬಸವ ಮಂಟಪದಲ್ಲಿ ಹೈದರಾಬಾದ ಲಿಂಗಾಯತ ಮಹಾರ್ಯಾಲಿ ಕುರಿತು ಕರೆದ ಪತ್ರಿಕಾಗೋಷ್ಠಿ ಹಾಗೂ ಜ್ಯೋತಿಯಾತ್ರೆಯ ಸಂಚಾರ ಕುರಿತು ಮಾತನಾಡುತ್ತ ಕಳೆದ ಒಂದು ತಿಂಗಳಿನಿAದ ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ 45 ಜಿಲ್ಲೆಗಳಲ್ಲಿ ಸಂಚರಿಸಿ ತಾವು ರ್ಯಾಲಿಯ ಪ್ರಚಾರ ಮಾಡಿದ್ದು, ದಕ್ಷಿಣ ಭಾರತದ ಸುಮಾರು ಆರು ರಾಜ್ಯಗಳ ಐದು ಲಕ್ಷಕ್ಕೂ ಅಧಿಕ ಜನರು ಲಿಂಗಾಯತ ರ್ಯಾಲಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಪ್ರತಿಪಾದಿಸಿದರು.
ಜೈನ, ಸಿಖ್, ಬೌದ್ಧ ಧರ್ಮಗಳಂತೆ ಲಿಂಗಾಯತವು ಒಂದು ಸ್ವತಂತ್ರ ಧರ್ಮ. ಲಿಂಗಾಯತ ಧರ್ಮಕ್ಕೆ ಬಸವಣ್ಣನವರೆ ಧರ್ಮಗುರು, ವಚನ ಸಾಹಿತ್ಯವೇ ಧರ್ಮಗ್ರಂಥ. ಹೀಗಾಗಿ ಈ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಗಾಗಿ ಕರ್ನಾಟಕದಲ್ಲಿ 2018 ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನ್ಯಾ. ನಾಗಮೋಹನದಾಸ ನೇತೃತ್ವದ ಆಯೋಗ ರಚಿಸಿ, ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ಇಂದು ಕರ್ನಾಟಕದಲ್ಲಿ ಲಿಂಗಾಯತರನ್ನು ಕಡೆಗಣನೆ ಮಾಡಿದ್ದಕ್ಕೆ ಬಿಜೆಪಿ ಸರ್ಕಾರ ಕೈಸುಟ್ಟುಕೊಂಡಿದೆ. 2024ರ ಲೋಕಸಭಾ ಚುನಾವಣೆ ಒಳಗಾಗಿ ಕೇಂದ್ರ ಸರ್ಕಾರವು ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡದಿದ್ದರೆ ಕರ್ನಾಟಕದಲ್ಲಾದ ಸ್ಥಿತಿಯೇ ಕೇಂದ್ರದಲ್ಲಾಗುವ ಸಂಭವವಿದೆ. ಆದ್ದರಿಂದ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಾಗೂ ಗೃಹಸಚಿವ ಅಮಿತ್ ಶಾ ಅವರು ಈ ಕುರಿತು ಪರಿಶೀಲನೆ ಮಾಡಬೇಕು. ರಾಜ್ಯದಲ್ಲಿ ಸಿಎಂ ಸಿದ್ಧರಾಮಯ್ಯನವರಾಗಲೀ, ಸಚಿವ ಎಂ.ಬಿ. ಪಾಟೀಲರಾಗಲಿ ಈ ಹಿಂದೆ ಪಶ್ಚಾತ್ತಾಪದ ಮಾತುಗಳನ್ನಾಡಿಲ್ಲ. ಕೇವಲ ಕಾಂಗ್ರೇಸ್ ಸರ್ಕಾರವಿದ್ದಾಗ ಮಾತ್ರ ರ‍್ಯಾಲಿ ನಡೆಯುತ್ತವೆ ಎನ್ನುವುದು ಶುದ್ಧ ಸುಳ್ಳು. ಬಿಜೆಪಿ ಸರ್ಕಾರ ಇದ್ದಾಗಲೂ ಬೆಂಗಳೂರಿನಲ್ಲಿ ಸತ್ಯಾಗ್ರಹ ನಡೆಸಿದ್ದೇವೆ. ರ‍್ಯಾಲಿ ಮಾಡಿದ್ದೇವೆ. ಬಿಜೆಪಿ ಸರ್ಕಾರಕ್ಕೆ ಮನವಿ ಕೂಡಾ ಸಲ್ಲಿಸಿದ್ದೇವೆ. ಹೀಗಾಗಿ ಒಟ್ಟಿನಲ್ಲಿ ಯಾವುದೇ ಸರ್ಕಾರವಿರಲಿ. ನಮ್ಮ ಹೋರಾಟ ನಿತ್ಯನಿರಂತರ. ಮಾನ್ಯತೆ ಪಡೆಯುವುದೊಂದೆ ನಮ್ಮ ಧ್ಯೇಯ ಎಂದು ಪೂಜ್ಯ ಚನ್ನಬಸವಾನಂದ ಸ್ವಾಮೀಜಿ ನುಡಿದರು.
ಅದೇ ರೀತಿ ತೆಲಂಗಾಣದಲ್ಲಿ 50 ಲಕ್ಷಕ್ಕೂ ಅಧಿಕ ಲಿಂಗಾಯತರಿದ್ದಾರೆ. ಕೆ.ಸಿ.ಆರ್. ಸರ್ಕಾರ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಗಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಇದರ ಜೊತೆಗೆ ಲಿಂಗಾಯತ ಸಮುದಾಯದ ಸ್ಥಳೀಯ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಮನವಿ ಸಲ್ಲಿಸಲು ಈ ರ್ಯಾಲಿ ಮಾಡಲಾಗುತ್ತಿದೆ. ಕರ್ನಾಟಕ ಮಹಾರಾಷ್ಟ್ರಗಳಲ್ಲಿ ಈಗಾಗಲೇ 23 ರ್ಯಾಲಿಗಳನ್ನು ಯಶಸ್ವಿಯಾಗಿ ಮಾಡಲಾಗಿದ್ದು, ಇದು 24 ನೇ ರ್ಯಾಲಿಯಾಗಿದೆ ಎಂದು ಪೂಜ್ಯರು ತಿಳಿಸಿದರಲ್ಲದೆ, ಕಲ್ಯಾಣ ಕರ್ನಾಟಕ ಹಾಗೂ ಬೀದರ ಜಿಲ್ಲೆಯಿಂದ ಸಹಸ್ರ ಸಂಖ್ಯೆಯಲ್ಲಿ ಬಸವ ಭಕ್ತರು ಪಾಲ್ಗೊಳ್ಳಬೇಕೆಂದು ಕರೆಕೊಟ್ಟರು. ಸ್ಥಳೀಯ ಕೆಲವು ಪ್ರಮುಖ ಬೇಡಿಕೆಗಳು…

  1. ಲಿಂಗಾಯತ ಲಿಂಗಬಲಿಜದವರನ್ನು ಓಬಿಸಿ ಪಟ್ಟಿಯಲ್ಲಿ ಸೇರಿಸುವುದು
  2. ಬಸವೇಶ್ವರ ಆರ್ಥಿಕ ಅಭಿವೃದ್ಧಿ ನಿಗಮ ಸ್ಥಾಪಿಸುವುದು
  3. ಲಿಂಗಾಯತರಿಗೆ ಸ್ಮಶಾನ ಭೂಮಿ ಒದಗಿಸುವುದು
  4. ಪ್ರತಿ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಬಸವ ಮಂಟಪ ಸ್ಥಾಪಿಸುವುದು. ಈ ಬೇಡಿಕೆಗಳನ್ನು ಸಹ ಮಾನ್ಯತೆಯ ಜೊತೆಗೆ ಸರ್ಕಾರದ ಮುಂದೆ ಇಡಲಾಗುತ್ತಿದೆ ಎಂದು ತಿಳಿಸಿದರು.
    ಬೀದರ ಬಸವ ಮಂಟಪದ ಪೂಜ್ಯ ಶ್ರೀ ಸದ್ಗುರು ಮಾತೆ ಸತ್ಯಾದೇವಿ ಮಾತನಾಡಿ ಜಿಲ್ಲೆಯ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹೈದರಾಬಾದ ಲಿಂಗಾಯತ ಮಗಾರ್ಯಾಲಿಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಕರೆ ನೀಡಿದರು.
    ಹೈದರಾಬಾದ ಜಿಯಾಗುಡ ಬಸವ ಮಂಟಪದ ಪೂಜ್ಯ ಶ್ರೀ ಸದ್ಗುರು ಅನಿಮಿಷಾನಂದ ಸ್ವಾಮೀಜಿ ಮಾತನಾಡಿ ಈಗಾಗಲೇ ನಾಂಪಲ್ಲಿಯ ಎಕ್ಸಿಬಿಷನ್ ಮೈದಾನದಲ್ಲಿ ಮಹಾರ್ಯಾಲಿಗಾಗಿ ಸಕಲ ಸಿದ್ಧತೆ ಮಾಡಲಾಗಿದೆ. ಬಂದ ಭಕ್ತರಿಗೆ ಪ್ರಸಾದ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಲಕ್ಷಾಂತರ ಶರಣರು ಭಾಗವಹಿಸುತ್ತಿರುವುದರಿಂದ ಯಾವುದೇ ರೀತಿಯ ತೊಂದರೆಯಾಗದAತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.
    ಬಸವ ಜ್ಯೋತಿ ಯಾತ್ರೆಯನ್ನು ನಗರದ ಬಸವಮಂಟಪದಲ್ಲಿ ಸ್ವಾಗತಿಸಲಾಯಿತು. ಬೀದರ ಮೂಲಕ ಹೈದರಾಬಾದಗೆ ತೆರಳಲಿರುವ ಜ್ಯೋತಿಯಾತ್ರೆ ಜೂನ್ 4 ರಂದು ಲಿಂಗಾಯತ ಮಹರ‍್ಯಾಲಿಯನ್ನು ಈ ಜ್ಯೋತಿಯಿಂದಲೇ ಉದ್ಘಾಟಿಸಲಾಗುತ್ತಿದೆ. ಈ ಜ್ಯೋತಿಯಾತ್ರೆ ಜೊತೆಗೆ ಉಪಸ್ಥಿತರಿರುವ ಹೈದರಾಬಾದ ಜಿಯಾಗುಡ ಬಸವ ಮಂಟಪದ ಪೂಜ್ಯ ಶ್ರೀ ಸದ್ಗುರು ಅನಿಮಿಷಾನಂದ ಸ್ವಾಮೀಜಿ, ಬೀದರ ಬಸವ ಮಂಟಪದ ಪೂಜ್ಯ ಸದ್ಗುರು ಮಾತೆ ಸತ್ಯಾದೇವಿ, ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ, ಗೌರವಾಧ್ಯಕ್ಷ ಮಲ್ಲಿಕಾರ್ಜುನ ಜೈಲರ್, ವಿಶ್ವಕ್ರಾಂತಿ ದಿವ್ಯಪೀಠದ ಓಂಪ್ರಕಾಶ್ ರೊಟ್ಟೆ, ರಾ.ಬ.ದಳದ ಗೌರವಾಧ್ಯಕ್ಷ ಬಸವಂತರಾವ ಬಿರಾದಾರ, ಉಪಾಧ್ಯಕ್ಷ ಶಿವಶರಣಪ್ಪ ಪಾಟೀಲ ಹಾರೂರಗೇರಿ, ರವಿಕಾಂತ ಬಿರಾದಾರ ವಕೀಲರು, ಮಲ್ಲಿಕಾರ್ಜುನ ಶಾಪುರ, ಬಸವರಾಜ ಸಂಗಮದ, ಧಮೇಂದ್ರ ಪೂಜಾರಿ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.ಎಂದು ಬೀದರ ರಾಷ್ಟ್ರೀಯ ಬಸವದಳ ಸಂಘಟನಾ ಕಾರ್ಯದರ್ಶಿ ಬಸವರಾಜ ಸಂಗಮದ್ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here