Home ಪ್ರಖರ ವಿಶೇಷ ಶೈಕ್ಷಣಿಕ ವರ್ಷ, ಲಿಟಲ್, ಹಾರ್ಟ್ ಶಾಲೆಯಲ್ಲಿ ಹಬ್ಬದ ವಾತಾವರಣ

ಶೈಕ್ಷಣಿಕ ವರ್ಷ, ಲಿಟಲ್, ಹಾರ್ಟ್ ಶಾಲೆಯಲ್ಲಿ ಹಬ್ಬದ ವಾತಾವರಣ

0
Academic year, festive atmosphere at Little Hart School

ಗಂಗಾವತಿ,1: 2023-24ಸಾಲಿಗೆ ಈ ದಿನ ಶಾಲೆಗಳು ಪುನರಾರಂಭಗೊಂಡಿದ್ದು ಶಾಲೆಯನ್ನು ಸುಣ್ಣ ಬಣ್ಣಗಳಿಂದ ಸ್ವಚ್ಛಗೊಳಿಸಿ ಹಸಿರು ತಳಿರು ತೋರಣಗಳಿಂದ ಅಲಂಕೃತಗೊಳಿಸಿ ಮಕ್ಕಳನ್ನು ಆರತಿ ಮಾಡುವುದರ ಮುಖಾಂತರ ಅದ್ಧುರಿಯಾಗಿ ಸ್ವಾಗತಿಸಲಾಯಿತು.ಶಾಲೆಯ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ ಹಾಗೂ ಮುಖ್ಯೋಪಾಧ್ಯಾಯರಾದ ಶ್ರೀಮತಿ ಪ್ರಿಯಕುಮಾರಿ ರಿಬ್ಬನ್ ಕತ್ತರಿಸುವ ಮುಖಾಂತರ ಮಕಳನ್ನು ಬರಮಾಡಿಕೊಂಡರು.


 ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ ಮಾತನಾಡಿ ಮಕ್ಕಳು ಹೊಸ ಹುರುಪಿನಿಂದ ಶಾಲೆಗೆ ಬರಲು ಅವರಿಗೆ ಸ್ವಾಗತ ಸಮಾರಂಭವನ್ನು ಏರ್ಪಡಿಸಿ ಪಾಲಕರೊದಿಂಗೆ ಸೆಲ್ಫಿ ತೆಗೆಸಿ ಖುಷಿಯಿಂದ ಶಾಲೆಗೆ ಸ್ವಾಗತಿಸಿದರು.ಪ್ರಿಯಾಕುಮಾರಿ ಮಾತನಾಡಿ ಈ ವರ್ಷ ತಾವೆಲ್ಲ ಅತ್ಯುತ್ತಮವಾಗಿ ಅಭ್ಯಾಸ ಮಾಡಿ ಶಾಲೆಗೆ ಹಾಗೂ ನಿಮ್ಮ ತಂದೆತಾಯಿಗೆ ಕೀರ್ತಿ ತರಬೇಕೆಂದು ತಿಳಿಸಿದರು.

LEAVE A REPLY

Please enter your comment!
Please enter your name here