Distribution of free text book and free uniform
ತಿಪಟೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕರಡಾಳು ಸಂತೆ ಮೈದಾನ ಶಾಲೆಯಲ್ಲಿ ಸರ್ಕಾರ ದಿಂದ ಸರಬರಾಜು ಮಾಡಿರುವ ಉಚಿತ ಪಠ್ಯಪುಸ್ತಕ ಹಾಗೂ ಉಚಿತ ಸಮವಸ್ತ್ರ ಗಳನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಕೆ.ಸಿ.ಗೋಪಿ ಮತ್ತು ಸದಸ್ಯರುಗಳು ವಿತರಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಎಸ್ ಡಿ ಎಂ ಸಿ ಅಧ್ಯಕ್ಷರು ಸರ್ಕಾರ ಗುಣಾತ್ಮಕ ಶಿಕ್ಷಣಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದು ಮಕ್ಕಳು ಸರ್ಕಾರದ ಈ ಮಹತ್ವಕಾಂಕ್ಷಿ ಯೋಜನೆಗಳ ಸದುಪಯೋಗಪಡಿಸಿಕೊಂಡು ತಾಲೂಕಿಗೆ ಮತ್ತು ರಾಜ್ಯಕ್ಕೆ ಕೀರ್ತಿ ತರುವಂತ ಮಕ್ಕಳು ನೀವಾಗಬೇಕು ಎಂದು ಕರೆ ನೀಡಿದರು ಈ ಕಾರ್ಯಕ್ರಮ ದಲ್ಲಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿರೂಪಾಕ್ಷ , ಎಸ್ ಡಿ ಎಂ ಸಿ ಸದಸ್ಯರಾದ ಮಂಜುನಾಥ್,ಲಕ್ಷ್ಮೀಕಾಂತ ರಾಜು,ವಿಜಯ್ ಶೀಲಾ,ಆಯೇಷಾ,ರಾಣಿ,ಚೈತನ್ಯ,ಕಲಾವತಿ ಗ್ರಾಮದ ಹಿರಿಯರಾದ ಶಿವನಂಜಪ್ಪ,ಶಿವಣ್ಣಮುಖ್ಯ ಶಿಕ್ಷಕಿ ಛಾಯ ಸಹ ಶಿಕ್ಷಕ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕ್ ಪ್ರಧಾನ ಕಾರ್ಯದರ್ಶಿ ಟಿ.ಕೆ.ಪಟ್ಟಾಭಿರಾಮು ಶಾಲಾ ಮಕ್ಕಳು ಉಪಸ್ಥಿತರಿದ್ದರು ವರದಿ ಸ್ವಾಮಿ ತಿಮ್ಮಲಾಪುರ